ಚಿನ್ನದ ದರದಲ್ಲಿ ಭಾರೀ ಏರಿಕೆ

01/08/2020

ನವದೆಹಲಿ ಆ. 1 : ರಾಷ್ಟ್ರರಾಜಧಾನಿಯಲ್ಲಿ ಶುಕ್ರವಾರ ಚಿನ್ನ ಹಾಗೂ ಬೆಳ್ಳಿಯ ದರದಲ್ಲಿ ಭಾರಿ ಏರಿಕೆ ಕಂಡಿದೆ. 24 ಕ್ಯಾರೆಟ್ ಚಿನ್ನದ ದರ 687 ರೂಪಾಯಿ ಏರಿಕೆಯಾಗಿದ್ದು 10 ಗ್ರಾಂ ಗೆ 54,538 ರೂಪಾಯಿಯಷ್ಟಾಗಿದೆ.
ಈ ಹಿಂದಿನ ವಹಿವಾಟಿನ ಪ್ರಕಾರ ಚಿನ್ನದ ದರ 10 ಗ್ರಾಮ್ ಗೆ 53,851 ರೂಪಾಯಿ ಇತ್ತು. ಗುರುವಾರದಂದು 63,056 ರೂಪಾಯಿ ಇದ್ದ ಕೆ.ಜಿ ಬೆಳ್ಳಿಯ ದರ 2,854 ರೂಗಳ ಏರಿಕೆ ಕಂಡಿದ್ದು ಈಗ 65,910 ರೂಪಾಯಿಗಳಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಔನ್ಸ್ ಚಿನ್ನದ ಬೆಲೆ 1,976 ಡಾಲರ್ ಗಳಿದ್ದು, ಬೆಳ್ಳಿಯ ಬೆಲೆ ಒಂದು ಔನ್ಸ್ ಗೆ 24 ಅಮೆರಿಕನ್ ಡಾಲರ್ ನಷ್ಟಿದೆ.