ಸ್ಯಾನಿಟೈಸರ್ ಸೇವಿಸಿ 10 ಮಂದಿ ಸಾವು

01/08/2020

ಪ್ರಕಾಶಂ ಆ. 1 : ಸ್ಯಾನಿಟೈಸರ್ ಸೇವಿಸಿ ಮೂವರು ಭಿಕ್ಷುಕರು ಸೇರಿ ಒಟ್ಟು 10 ಮಂದಿ ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಕುರಿಚೇಡು ಮಂಡಲ ಹೆಡ್ ಕ್ವಾರ್ಟರ್ ಟೌನ್ ನಲ್ಲಿ ಕಳೆದ ಮೂರು ದಿನಗಳಿಂದ ಅಸಹಜ, ಅನುಮಾನಾಸ್ಪದ ಸಾವುಗಳು ಸಂಭವಿಸುತ್ತಿದ್ದವು. ಕಳೆದ ಮೂರು ದಿನಗಳಿಂದ 3 ಸಾವು ಸಂಭವಿಸುತ್ತಿದ್ದರೆ ಶುಕ್ರವಾರ ಬೆಳಿಗ್ಗೆ 7 ಜನರು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಕುರಿಚೇಡು ಪೊಲೇರಮ್ಮ ದೇವಾಲಯದ ಸುತ್ತಮುತ್ತಲಿರುವ ಪ್ರದೇಶಗಳ 7 ಮಂದಿ ತೀವ್ರ ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು.