ಕೊಡಗಿನಲ್ಲಿ 8 ಹೊಸ ಕೋವಿಡ್ ಪ್ರಕರಣ ಪತ್ತೆ : 301 ಸೋಂಕಿತರು ಗುಣಮುಖ

ಮಡಿಕೇರಿ ಆ. 1 : ಜಿಲ್ಲೆಯಲ್ಲಿ ಶನಿವಾರ 8 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 457ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದರು.
ವಿರಾಜಪೇಟೆಯ ಗಾಯತ್ರಿ ಭವನ ಹಿಂಭಾಗದ 52 ವರ್ಷದ ಪುರುಷ, ಮಂಗಳೂರು ಪ್ರಯಾಣದ ಇತಿಹಾಸ ಹೊಂದಿರುವ ಮಡಿಕೇರಿ ಅಶೋಕಪುರದ 28 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.
ಸೋಮವಾರಪೇಟೆ ಶನಿವಾರ ಸಂತೆ ಮುಖ್ಯರಸ್ತೆಯ 31 ವರ್ಷದ ಮಹಿಳೆ, ಹೆಬ್ಬಾಲೆಯ ಕಾಳಿಕಾಂಬ ದೇವಾಲಯ ಬಳಿಯ 42 ವರ್ಷದ ಪುರುಷನಿಗೆ ಸೋಕು ಪತ್ತೆಯಾಗಿದೆ.
ಸುಂಟಿಕೊಪ್ಪ ಮಟನ್ ಮಾರುಕಟ್ಟೆಯ 53 ವರ್ಷದ ಪುರುಷ. ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮುಖಾಂತರ ಮಡಿಕೇರಿ ಮಹದೇವ ಪೇಟೆಯ 51 ವರ್ಷದ ಮಹಿಳೆ. ಗೋಣಿಕೊಪ್ಪಲಿನ ಈರಣ್ಣ ಕಾಲೋನಿಯ 13 ವರ್ಷದ ಬಾಲಕಿ ಹಾಗೂ ಮಡಿಕೇರಿ ತ್ಯಾಗರಾಜ ಕಾಲೋನಿಯ 45 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ ಒಟ್ಟು 457 ಕೋವಿಡ್-19 ಪ್ರಕರಣಗಳು ದೃಢಪಟ್ಟಿದ್ದು, 301 ಮಂದಿ ಗುಣಮುಖರಾಗಿದ್ದಾರೆ. 147 ಸಕ್ರಿಯ ಪ್ರಕರಣಗಳಿದ್ದು, 9 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 108 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
