ತುಳುನಾಡಿನ ಕಾರ್ಣಿಕ ಶಕ್ತಿ ಕೊರಗಜ್ಜ
01/08/2020

ಮಡಿಕೇರಿ ಆ.1 : ತುಳುನಾಡಿನ ದೈವಗಳಲ್ಲಿ ಸ್ವಾಮಿ ಕೊರಗಜ್ಜರಿಗೆ ಅಪಾರ ಶಕ್ತಿಯಿದೆ ಎನ್ನುವುದು ತುಳುಜನರ ಅಪ್ಪಟ ನಂಬಿಕೆ. ಬಚ್ಚಿರೆ (ವೀಳ್ಯದೆಲೆ) ಹಾಗೂ ಚಕ್ಕುಲಿ ದೈವಕ್ಕೆ ನೀಡುವ ಭಕ್ತರ ಕಾಣಿಕೆ. ತುಳುನಾಡಿನ ಸ್ವಾಮಿ ಕೊರಗಜ್ಜ ಎಂದು ಯಾರೇ ಹೇಳಿದ್ರು ಅವರು ಕುಡ್ಲದವರು ಎಂದು ಹೇಳಿಬಿಡಬಹುದು. ಕುಡ್ಲದಲ್ಲಿ ಓಡಾಡುವ ಹತ್ತರಲ್ಲಿ ಎರಡು ವಾಹನವಾದರೂ ಸ್ವಾಮಿ ಕೊರಗಜ್ಜ ಎಂದು ಹೆಸರು ಹಾಕಿಕೊಂಡು ಓಡಾಡುತ್ತಾರೆ. ತುಳುವರಿಗೆ ಕೊರಗಜ್ಜ ಎಂದರೆ ಅದೊಂದು ಕಾರ್ಣಿಕ ಶಕ್ತಿ ಎನ್ನುವ ನಂಬಿಕೆಯಿದೆ. ಯಾವುದಾದರೂ ವಸ್ತು ಕಳೆದುಹೋದರೆ ಭಕ್ತಿಯಿಂದ ಕೊರಗಜ್ಜನನ್ನು ನೆನೆದರೆ ಸಾಕು. ಕಳೆದು ಹೋದ ವಸ್ತು ಸಿಕ್ಕಿ ಬಿಡುತ್ತದೆ ಎನ್ನುವ ನಂಬಿಕೆಯಲ್ಲಿ ತುಳುವರು ಬದುಕು ಕಟ್ಟುತ್ತಿದ್ದಾರೆ.
ಕೃಪೆ : ಕುಡ್ಲ ಸಿಟಿ
