ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಬಿ.ತಿಮ್ಮಪ್ಪಗೆ ಬಿಳ್ಕೋಡುಗೆ

01/08/2020

ಸುಂಟಿಕೊಪ್ಪ,ಆ.1: ಪೊಲೀಸ್ ವೃತ್ತಿ ಮುಳ್ಳಿನ ನಡಿಗೆ ಎಷ್ಟು ಸೂಕ್ಷ್ಮವಾಗಿ ಕರ್ತವ್ಯ ನಿರ್ವಹಿಸಿದ್ದರೂ ಕಪ್ಪು ಚುಕ್ಕಿ ಹೆಗಲ ಮೇಲೆ ಹೊತ್ತುಕೊಂಡು ಬರುತ್ತದೆ. 37 ವರ್ಷಗಳ ಸುದೀರ್ಘ ಅವಧಿಯಲ್ಲಿ ಕಳಂಕರಹಿತವಾಗಿ ಬಿ.ತಿಮ್ಮಪ್ಪ ಸೇವೆ ಸಲ್ಲಿಸಿದ್ದಾರೆ ಎಂದು ಡಿವೈಎಸ್‍ಪಿ ಎಂ.ಶೈಲೇಂದ್ರ ಹೇಳಿದರು.
ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಬಿ.ತಿಮ್ಮಪ್ಪ ವಯೋನಿವೃತ್ತಿ ಹೊಂದಿದ್ದು ಅವರಿಗೆ ಏರ್ಪಡಿಸಲಾಗಿದ್ದ ಬಿಳ್ಕೋಡಿಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪೊಲೀಸರು ಎಷ್ಟೇ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದರು. ಸಾರ್ವಜನಿಕರು ಸಂಶಯದೃಷ್ಟಿಯಿಂದ ನೋಡುತ್ತಾರೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ನಮ್ಮ ಜವಾಬ್ಧಾರಿ ಹೆಚ್ಚಿದೆ. ಸ್ವಲ್ಲಪ ಎಡವಿದರೂ ಆರೋಪ ಕಟ್ಟಿಟ್ಟ ಬುತ್ತಿಯಾಗುತ್ತದೆ. ಬೇರೆ ಇಲಾಖೆಗಿಂತ ಪೊಲೀಸ್ ಸೇವೆ ವಿಭಿನ್ನವಾದುದು. ಸುಂಟಿಕೊಪ್ಪ ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ಕೊರತೆಯಿದ್ದರೂ ಉತ್ತಮವಾಗಿ ತಿಮ್ಮಪ್ಪ ಅವರು 9 ತಿಂಗಳು ಕರ್ತವ್ಯ ನಿರ್ವಹಿಸಿದರು ಎಂದು ಶ್ಲಾಘಿಸಿದರು.
ಮುಖ್ಯ ಅತಿಥಿಗಾಳಗಿ ಆಗಮಿಸಿದ್ದ ಕುಶಾಲನಗರ ವೃತ್ತ ನಿರೀಕ್ಷಕರಾದ ಮಹೇಶ್ ಮಾತನಾಡಿ ತಿಮ್ಮಪ್ಪ ಅವರು ತಮ್ಮ ವೃತ್ತಿ ಜೀವನದಲ್ಲಿ ಕಪ್ಪುಚುಕ್ಕೆಗೆ ಒಳಗಾಗದೆ ಕರ್ತವ್ಯವನ್ನು ನಿರ್ವಹಿಸಿ ವಯೋನಿವೃತ್ತಿ ಹೊಂದುತ್ತಿರುವುದು ಬಹುದೊಡ್ಡ ಸಾಧನೆಯೇ ಸರಿ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿ ಬಿ.ತಿಮ್ಮಪ್ಪ ಅವರು ಕೊಡಗಿಗೆ ಪ್ರಥಮವಾಗಿ ಬಂದಾಗ ಅತಿವೃಷ್ಠಿಯಿಂದ ಜಲಪ್ರಳಯ ಭೂಕುಸಿತದಿಂದ ಅನಾಹುತ ಸಂಭವಿಸಿತ್ತು ಜನ ಜೀವನ ಅಸ್ತವ್ಯಸ್ಥವಾಗಿತ್ತು. ಸಾರ್ವಜನಿಕರ ಸಹ ಸಿಬ್ಬಂದಿಗಳ ಮೇಲಾಧಿಕಾರಿಗಳ ನಿರ್ದೇಶನದಂತೆ ಉತ್ತಮ ಸೇವೆ ಸಲ್ಲಿಸಲು ಸಾಧ್ಯವಾಯಿತು. ಸಿಬ್ಬಂದಿಗಳಿಗೆ ಹೆಚ್ಚಿನ ಕರ್ತವ್ಯದ ಒತ್ತಡ ನಡುವೆಯೂ ಕರೋನಾ ಕೊವೀಡ್-19 ಬಂದೋಬಸ್ತ್ ಕಾನೂನು ಸುವ್ಯವಸ್ಥೆಗೆ ಕರ್ತವ್ಯ ನಿರ್ವಹಿಸಿದ್ದಾರೆ. ಮೇಲಾಧಿಕಾರಿಗಳು, ಸಹ ಸಿಬ್ಬಂದಿಗಳು ಹಾಗೂ ಊರಿನ ಜನತೆ ಹೆಚ್ಚಿನ ಸಹಕಾರ ನೀಡಿದ್ದಾರೆ ಅವರಿಗೂ ದನ್ಯವಾದ ಆರ್ಪಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸೋಮವಾರಪೇಟೆ ವೃತ್ತ ನಿರೀಕ್ಷಕರಾದ ನಂಜುಡೇಗೌಡ, ಸೋಮವಾರಪೇಟೆ ಠಾಣಾಧಿಕಾರಿಶಿವಶಂಕರ್, ಪ್ರಭಾರ ಎಸ್.ಐ ಕಾವೇರಪ್ಪ, ಎ.ಎಸ್.ಐಗಳಾದ ಶಿವಪ್ಪ, ಶ್ರೀನಿವಾಸ್ ಮುಖ್ಯಪೇದೆಗಳು, ಪೇದೆಗಳು ಹಾಗೂ ಗೃಹರಕ್ಷಕ ಸಿಬ್ಬಂದಿಗಳು ಇದ್ದರು.