ಸುಂಟಿಕೊಪ್ಪದ ಜನತಾ ಕಾಲೋನಿ ಸೀಲ್‍ಡೌನ್

01/08/2020

ಸುಂಟಿಕೊಪ್ಪ,ಆ.1:ಸುಂಟಿಕೊಪ್ಪ 1ನೇ ವಿಭಾಗದ ಜನತಾ ಕಾಲೋನಿ ಪುರುಷ 53 ವರ್ಷದ ವ್ಯಕ್ತಿಗೆ ಕೋವಿಡ್-19 ಪಾಸಿಟಿವ್ ಪತ್ತೆಯಾಗಿದೆ. ಈ ವಿಭಾಗಕ್ಕೆ ಅಧಿಕಾರಿಗಳು ಆಗಮಿಸಿ ಸಿಲ್‍ಡೌನ್ ಮಾಡಲಾಗಿದೆ.
ಗ್ರಾ.ಪಂ.ನಲ್ಲಿ ಅಧಿಕಾರಿಯಾಗಿರುವ ಇವರ ಗಂಟಲು ದ್ರವ ಪರೀಕ್ಷೆಯಿಂದ ಕರೋನಾ ಪಾಸಿಟಿವ್ ಸೋಂಕು ಧೃಢಪಟ್ಟಿದೆ. ಮಡಿಕೇರಿಯ ಕೋಓವಿಡ್ 19 ಆಸ್ಪತ್ರೆಗೆ ಇವರನ್ನು ಚಿಕಿತ್ಸೆಗಾಗಿ ಸೇರಿಸಲಾಗಿದೆ.
ಜನತಾ ಕಾಲೋನಿಯಲ್ಲಿ 13 ಮನೆಗಳಿದ್ದು ಪಂಚಾಯಿತಿ ವತಿಯಿಂದ ಪೌರಕಾರ್ಮಿಕರು ಬಡಾವಣೆಗೆ ಜೌಷಧಿ ಸಿಂಪಾಡಣೆಗೊಳಿಸಿದರು.
ಸೋಮವಾರಪೇಟೆ ತಹಶೀಲ್ಧಾರ್ ಗೋವಿಂದರಾಜು,ಸುಂಟಿಕೊಪ್ಪ ನಾಡ ಕಛೇರಿಯ ಕಂದಾಯ ಪರಿವೀಕ್ಷಕರಾದ ಶಿವಪ್ಪ, ಸುಂಟಿಕೊಪ್ಪ ಗ್ರಾ..ಪಂ. ಪಿಡಿಓ ವೇಣುಗೋಪಾಲ್, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಜೀವನ್, ಆರೋಗ್ಯ ಸಹಾಯಕರಾದ ಚಂದ್ರೇಶ್ ಸುಂಟಿಕೊಪ್ಪ ಪ್ರಭಾರ ಠಾಣಾಧಿಕಾರಿ ಕಾವೇರಪ್ಪ ಅವರ ಸಮುಖದಲ್ಲಿ ಸೀಲ್‍ಡೌನ್ ಮಾಡಲಾಯಿತು.