ದಲಿತ ಸಂಘರ್ಷ ಸಮಿತಿಯಿಂದ ಸುಂಟಿಕೊಪ್ಪ ಠಾಣಾಧಿಕಾರಿ ಬಿ.ತಿಮ್ಮಪ್ಪ ಗೆ ಸನ್ಮಾನ

01/08/2020

ಸುಂಟಿಕೊಪ್ಪ,ಆ.1: ಅಂಬೇಡ್ಕರ್ ಭವನದಲ್ಲಿ ಸುಂಟಿಕೊಪ್ಪ ಠಾಣಾಧಿಕಾರಿಯಾಗಿ ನಿವೃತ್ತರಾದ ಬಿ.ತಿಮ್ಮಪ್ಪ ಅವರಿಗೆ ದಲಿತ ಸಂಘರ್ಷ ಸಮಿತಿ ವತಿಯಿಂದ ಮೈಸೂರು ಪೆಟ್ಟ ತೊಡೆಸಿ,ಶಾಲುಹೊದೆಸಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಈ ಸಂದರ್ಭ ಸುಂಟಿಕೊಪ್ಪ ಜೆಸಿಐ ಸಂಸ್ಥೆ ಅಧ್ಯಕ್ಷ ಹಾಗೂ ಜನವಿಕಾಸ ವೃದ್ಧಾಶ್ರಮ ಮೇಲಲ್ವಿಚಾರಕರಾದ ರಮೇಶ್, ಅಂಬೇಡ್ಕರ್ ಸಂಘದ ಅಧ್ಯಕ್ಷ ಎಂ.ಎಸ್.ರವಿ, ಜಿಲ್ಲಾ ಪತ್ರಕರ್ತರ ಸಂಘದ ನಿರ್ದೇಶಕರಾದ ಬಿ.ಡಿ.ರಾಜು ರೈ, ಸ್ತ್ರೀಶಕ್ತಿ ಸಂಘಗಳಾದ ಭೂಮಿಕ,ಜನನಿ,ಸೂರ್ಯ ಪ್ರತಿನಿಧಿಗಳಾದ ಮುನಿಯಮ್ಮ,ಸೇಲ್ವಿ ಸ್ವಸ್ಥ ಸಂಸ್ಥೆಯ ಸಿಬಿಆರ್ ಸಂಯೋಜಕರಾದ ಮುರುಗೇಶ್, ಜೆಸಿಐ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಅರುಣ್‍ಕುಮಾರ್, ವಾಹನ ಚಾಲಕರ ಸಂಘದ ಮಾಜಿ ಅಧ್ಯಕ್ಷ ಬಿ.ಕೆ.ತಿಮ್ಮಪ್ಪ, ಸವಿತ ಸಮಾಜದ ಅಧ್ಯಕ್ಷ ಪದಾಧಿಕಾರಿಗಳು ಹಾಗೂ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಮತ್ತಿತರರು ಇದ್ದರು.