ಕೊರೋನಾದಿಂದ ಗುಣಮುಖ : ಚಪ್ಪಾಳೆ ತಟ್ಟಿ ಬಾಲಕನನ್ನು ಬರಮಾಡಿಕೊಂಡ ಬಡಾವಣೆಯ ನಿವಾಸಿಗಳು
01/08/2020

ಸುಂಟಿಕೊಪ್ಪ,ಆ.1: ಸುಂಟಿಕೊಪ್ಪ ಶಿವರಾಮ ರೈ ಬಡಾವಣೆಯ ಕರೋನಾದಿಂದ ಗುಣಮುಖ ಹೊಂದಿ ಹಿಂತಿರುಗಿದ್ದ ಬಾಲಕನಿಗೆ ಶನಿವಾರ ಬಡಾವಣೆಯ ನಿವಾಸಿಗಳು ಹೂಗುಚ್ಚ ಸಿಹಿ ಹಂಚಿ ಸಂಭ್ರಮಿಸಿದರು.
ಶಿವರಾಮ ರೈ ಬಡಾವಣೆಯಲ್ಲಿ ತಾ. 25 ರಂದು ಬಾಲಕನೋರ್ವನಿಗೆ ಕರೋನಾ ಸೋಂಕು ಪಾಸಿಟಿವ್ ಪತ್ತೆಯಾಗಿತ್ತು ಆ ಬಾಲಕನನ್ನು ಕೂಡಿಗೆಯ ಕೋವಿಡ್ ಸೆಂಟರ್‍ನಲ್ಲಿ ಚಿಕಿತ್ಸೆ ಕರೆದೋಯ್ಯಲಾಗಿತ್ತು. ಬಾಲಕನ್ನು ಗುಣಮುಖ ಹೊಂದಿದ್ದನು. ಶನಿವಾರ ಕೋವಿಡ್ ಕೇಂದ್ರದಿಂದ ಮನೆಗೆ ಕಳುಹಿಸಲಾಗಿದ್ದು ಬಾಲಕನಿಗೆ ಬಡಾವಣೆಯ ನಿವಾಸಿಗಳು ಮಾಲಾರ್ಪಣೆ ಹೂಗುಚ್ಚ ನೀಡಿ ಚಪ್ಪಾಳೆ ತಟ್ಟಿ ಅದ್ದೂರಿಯಾಗಿ ಬರ ಮಾಡಿಕೊಂಡರು ನಂತರ ಸಿಹಿಯನ್ನು ನೀಡಿ ಬಡಾವಣೆಯ ನಿವಾಸಿಗಳೆ ಬಾಲಕನಿಂದ ಸಿಹಿ ಹಂಚಿಸಿ ಸಂಭ್ರಮಿಸಿದರು.
