ಮಾದಾಪುರದಲ್ಲಿ ಗಾಂಜಾ ಮಾರಾಟ : ಮೂವರ ಬಂಧನ

01/08/2020

ಸೋಮವಾರಪೇಟೆ ಆ.1 : ಮಾದಾಪುರ ಈಗ್ಗೊಡ್ಲು ಜಂಕ್ಷನ್‍ನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಮಾಲು ಸಮೇತ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಮಾದಾಪುರದ ವಿನೋದ್, ಜಂಬೂರು ಬಾಣೆ ತಂಗದೊರೈ, ಶಾಫಿ ಬಂಧಿತ ಆರೋಪಿಗಳು. ಬಂಧಿತರಿಂದ 185 ಗ್ರಾಂ ಗಾಂಜಾ, ಸಿಗರೇಟಿಗೆ ಗಾಂಜಾ ತುಂಬುವ ಚಿಕ್ಕ ಯಂತ್ರವನ್ನು ವಶಪಡಿಸಿಕೊಂಡಿದ್ದಾರೆ. ಕಾರ್ಯಚರಣೆಯಲ್ಲಿ ಸರ್ಕಲ್ ಇನ್ಸ್‍ಪೆಕ್ಟರ್ ನಂಜುಂಡೇಗೌಡ, ಠಾಣಾಧಿಕಾರಿ ಶಿವಶಂಕರ್, ಸಿಬ್ಬಂದಿಗಳಾದ ಶಿವಕುಮಾರ್, ಪ್ರವೀಣ್, ಬಸಪ್ಪ, ಮಂಜುನಾಥ್, ಶಿವರಾಜ್, ನದಾಫ್, ಕುಮಾರ್ ಭಾಗವಹಿಸಿದ್ದರು. ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.