ಸಾಮಾಜಿಕ ಜಾಲತಾಣದ ಒಳಿತು-ಕೆಡುಕು ಪ್ರಬಂಧ ಸ್ಪರ್ಧೆ ದಿನಾಂಕ ವಿಸ್ತರಣೆ

02/08/2020

ಮಡಿಕೇರಿ : ಎಸ್. ಕೆ.ಎಸ್.ಎಸ್.ಎಫ್ ಜಿಸಿಸಿ – ಕೊಡಗು ಆಶ್ರಯದಲ್ಲಿ ಸಾಮಾಜಿಕ ಜಾಲತಾಣಒಳಿತು – ಕೆಡುಕು ಎಂಬ ವಿಷಯದ ಕುರಿತು ಮುಕ್ತ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಹಿಂದೆ ಪ್ರಬಂಧಗಳನ್ನು ಕಳುಹಿಸಲು ದಿನಾಂಕ 03-08-2020 ಕೊನೆಯ ದಿನಾಂಕವೆಂದು ಘೋಷಿಸಲಾಗಿತ್ತು.ಹೆಚ್ಚಿನ ಅವಕಾಶ ಕಲ್ಪಿಸುವ ಉದ್ದೇಶದಿಂದ  ಇದನ್ನು ದಿನಾಂಕ 10-08-2020 ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಎಸ್.ಕೆ.ಎಸ್ ಎಸ್.ಎಫ್ ಜಿಸಿಸಿ- ಕೊಡಗು ಅಧ್ಯಕ್ಷ ಹುಸೈನ್ ಫೈಝಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಾವುದೇ ವಯೋಮಿತಿಯವರು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದ್ದು;ಕನ್ನಡ,ಇಂಗ್ಲೀಷ್, ಮಲಯಾಳಂ ಭಾಷೆಗಳಲ್ಲಿ ಇರುತ್ತದೆ. ಲೇಖನಗಳನ್ನು ದೂರವಾಣಿ ವ್ಯಾಟ್ಸ್ ಅಪ್ ಸಂಖ್ಯೆ +971563210719 ಅಥವಾ ಈ ಮೇಲ್ ವಿಳಾಸ kodaguskssfgcc@gmail.com ಗೆ  ಕಳುಹಿಸಿಕೊಡಬಹುದು.ಅತ್ಯುತ್ತಮ ಲೇಖನಗಳಿಗೆ ಬಹುಮಾನ ನೀಡಲಾಗುವುದು ಎಂದು ಹುಸೈನ್ ಫೈಝಿ ತಿಳಿಸಿದ್ದಾರೆ.