ಸಿಎನ್‍ಸಿಯಿಂದ ಕಕ್ಕಡ ಪದ್‍ನೆಟ್ ನಮ್ಮೆ ಆಚರಣೆ

August 3, 2020

ಮಡಿಕೇರಿ ಆ. 3 : ಕೊಡವ ನ್ಯಾಷನಲ್ ಕೌನ್ಸಿಲ್ (ಸಿ.ಎನ್.ಸಿ) ವತಿಯಿಂದ 25ನೇ ವರ್ಷದ ಸಾರ್ವತ್ರಿಕ “ಕಕ್ಕಡ ಪದ್‍ನೆಟ್ಟ್” ನಮ್ಮೆಯನ್ನು ಕ್ಯಾಪಿಟಲ್ ವಿಲೇಜಿನಲ್ಲಿ ಆಚರಿಸಲಾಯಿತು.
ಕೊಡವ ಲ್ಯಾಂಡ್ ಸ್ವಾಯತ್ತತೆ ಹಕ್ಕೊತ್ತಾಯ, ಕೊಡವ ಸೂಕ್ಷ್ಮಾತಿ ಸೂಕ್ಷ್ಮಅಲ್ಪಸಂಖ್ಯಾತ ಕೊಡವ ಬುಡಕಟ್ಟು ಕುಲಕ್ಕೆ ಸಂವಿಧಾನದ 342ನೇ ವಿಧಿ ಪ್ರಕಾರ ರಾಜ್ಯಾಂಗ ಖಾತರಿ, ಕೊಡವ ತಕ್ಕನ್ನು ಸಂವಿಧಾನದ 8ನೇ ಶೆಡ್ಯೂಲ್‍ಗೆ ಸೇರಿಸಬೇಕು ಮತ್ತು ಮೈಕ್ರೋ ಮೈನಾರಿಟಿ ಕೊಡವ ಬುಡಕಟ್ಟು ಕುಲ ಮತ್ತವರ ಅಪೂರ್ವ ಸಾಂಸ್ಕøತಿಕ ಪರಂಪರೆಯನ್ನು ವಿಶ್ವ ಸಂಸ್ಥೆಯ ಯುನೆಸ್ಕೋದ ಇಂಟ್ಯಾಂಜಿಬಲ್ ಕಲ್ಚರಲ್ ಹೆರಿಟೇಜ್ ಪಟ್ಟಿಗೆ ಸೇರಿಸಬೇಕೆಂಬ ಸರ್ವೋಚ್ಛ ಹಕ್ಕೊತ್ತಾಯದ ನಿರ್ಣಯವನ್ನು ಅಂಗೀಕರಿಸಲಾಯಿತು.
ಕ್ಯಾಪಿಟಲ್ ವಿಲೇಜ್‍ನಲ್ಲಿ ಕಕ್ಕಡ ಪದ್‍ನೆಟ್ಟ್ ನಮ್ಮೆಯನ್ನು ಸಕಲ ಸಾಂಸ್ಕøತಿಕ ವಿಧಿ ವಿಧಾನಗಳ ಮೂಲಕ ಆಚರಿಸಲಾಯಿತು.
ಭತ್ತದ ಗದ್ದೆಯಲ್ಲಿ ನಾಟಿಯನ್ನು ನೆಟ್ಟು ನಂತರ ಮದ್ದ್ ಪುಟ್ಟ್ ಮತ್ತು ಮದ್ದ್ ಪಾಯಸ ಹಾಗೂ ನಾಡು ಕೋಳಿಯ ಭಕ್ಷ್ಯವನ್ನು ಪ್ರಸಾದದಂತೆ ಎಲ್ಲರೂ ಸ್ವೀಕರಿಸಿದರು.
ಸಿ.ಎನ್.ಸಿ. ಅಧ್ಯಕ್ಷ ಎನ್. ಯು. ನಾಚಪ್ಪ ಕೊಡವರವರ ನೇತೃತ್ವದಲ್ಲಿ ನಡೆದ ವಾರ್ಷಿಕ ಸಾಂಪ್ರದಾಯಿಕ ಸಾರ್ವತ್ರಿಕ ಕಕ್ಕಡ ಪದ್ನೆಟ್ಟ್ ನಮ್ಮೆ ಕಾರ್ಯಕ್ರಮದಲ್ಲಿ ಕಲಿಯಂಡ ಪ್ರಕಾಶ್, ಬೊಪ್ಪಂಡ ಬೊಳ್ಳಮ್ಮ, ಪಟ್ಟಮಾಡ ಲಲಿತ, ಇಟ್ಟಿರ ಸಬಿತಾ, ನಂದಿನೆರವಂಡ ರೇಖಾ, ಅಪ್ಪಚ್ಚಿರ ರಮ್ಮಿ ನಾಣಯ್ಯ, ಅಪ್ಪಚ್ಚಿರ ರೀನಾ ನಾಣಯ್ಯ, ಪುಲ್ಲೇರ ಸ್ವಾತಿ, ನಂದಿನೆರವಂಡ ನಿಶಾ, ಚೋಳಪಂಡ ಜ್ಯೋತಿ, ಕೇಚಮಾಡ ಶಿಲ್ಪ, ಲೆ|| ಕರ್ನಲ್ ಪಾರ್ವತಿ, ನಂದಿನೆರವಂಡ ವಿಜು, ನಂದಿನೆರವಂಡ ಬೀನಾ, ನಂದಿನೆರವಂಡ ಸುಮಿತ್ರಾ, ಮಡಿಕೇರಿ ಕೊಡವ ಸಮಾಜ ಪ್ರೆಸಿಡೆಂಟ್ ಕೊಂಗಂಡ ದೇವಯ್ಯ, ಬಾಚರಣಿಯಂಡ ಚಿಪ್ಪಣ್ಣ, ಪುಳ್ಳಂಗಡ ನಟೇಶ್, ಕಂಡೇರಾ ಸುರೇಶ್, ಪಾರುವಂಗಡ ನವೀನ್, ಅಜ್ಜಿಕುಟ್ಟಿರ ಲೋಕೇಶ್, ಬೊಟ್ಟಂಗಡ ಗಿರೀಶ್, ಕಿರಿಯಮಾಡ ಶರಿನ್, ಅಪ್ಪೆಯ್ಯಂಗಡ ಮಾಲೆ, ಪುಲ್ಲೇರ ಕಾಳಪ್ಪ, ಚಂಡೀರ ರಾಜ, ಐಲಪಂಡ ಮಿಟ್ಟು, ಪುಟ್ಟಿಚಂಡ ಡಾನ್, ಮನೋಟಿರ ಚಿಣ್ಣಪ್ಪ, ಮೇದುರ ಕಂಠಿ, ಬಡಲೆರ ಕೌಶಿಕ್, ಚೋಳಪಂಡ ನಾಣಯ್ಯ, ಮಾಚಿಮಡ ಲವ, ಮಾದ್ರೀರ ಕರು ಬಯ್ಯ, ಪುದಿಯೋಕ್ಕಡ ಕಾಶಿ, ನಂದಿನೆರವಂಡ ವಿಜು, ಓಡಿಯಂಡ ನವೀನ್, ಕೂಪದಿರ ಪ್ರಣಬ್, ಕುಪಧಿರ ಸಾಬು, ನಂದಿನೆರವಂಡ ಬೋಪಣ್ಣ, ಮಂಡೇಪಂಡ ಮನೋಜ್, ಅಳಮಂಡ ಜೈ, ನಂದಿನೆರವಂಡ ಅನಿರುಧ್, ಮನೋಟಿರ ಜೀತ್ ಬೊಳ್ಳಿಯಪ್ಪ, ಮನೋಟಿರ ಉತ್ತಮ್ ಅಯ್ಯಪ್ಪ, ಮನೋಟಿರ ಜಗದೀಶ, ಕಾಟುಮಣಿಯಂಡ ಉಮೇಶ್, ಕೆಚಮಾಡ ಶರತ್, ಕುಲ್ಲೇಟಿರ ಅರುಣಾ ಬೇಬ, ಬೇಪಡಿಯಂಡ ದಿನು, ನಂದಿನೆರವಂಡ ಮಧು, ನಂದಿನೆರವಂಡ ಅಯ್ಯಣ್ಣ, ನಂದಿನೆರವಂಡ ಅಪ್ಪಯ್ಯ, ಚಂಬಂಡ ಜನತ್, ಚಂಬಂಡ ಜಾಗ್ರತ್, ಪಟ್ರಪಂಡ ರಮೇಶ್, ಬೇಪಡಿಯಂಡ ಬಿದ್ದು, ನೇರ್ಪಂಡ ಜಿಮ್ಮಿ, ಕೊಡೀರ ವಿನೋದ್, ಕೊಡೀರ ಮಧು, ಅಜ್ಜಿನಿಕಂಡ ಸನ್ನಿ ಮಾಚಯ್ಯ, ಬಾಚಮಂಡ ರಾಜ ಪೂವಣ್ಣ, ಬಾಚಮಂಡ ಬೆಲ್ಲು, ಕೋಳೆರ ರನ್ನು, ಚೀಯಕಪೂವಂಡ ರಂಜು, ನಂದಿನೆರವಂಡ ದಿನೇಶ್, ಚೇನಂಡ ರಘು, ಪುಲ್ಲೇರ ಪೆÇನ್ನಣ್ಣ, ಕೈಬಿಲರ ದರ್ಶನ್, ನಂದಿನೆರವಂಡ ಧನುಷ್, ಮನೋಟಿರ ಸ್ವರೂಪ್, ಮನೋಟಿರ ನಂದ, ಪುಲ್ಲೇರ ಧನುಷ್, ಚೆಂದಂಡ ಉತ್ತಯ್ಯ ಮುಂತಾದವರು ಭಾಗವಹಿಸಿದ್ದರು.