ಸರ್ಕಾರ ಸಾಧನೆಯ ಕರಪತ್ರ ಹಂಚಿಕೆ

03/08/2020

ಮಡಿಕೇರಿ ಆ. 3 : ನಗರದ ವಾರ್ಡ್ ಸಂಖ್ಯೆ 16 ಮತ್ತು 18ರಲ್ಲಿ ರಾಜ್ಯ ಬಿಜೆಪಿ ಸರ್ಕಾರದ ಒಂದು ವರ್ಷ ಆಡಳಿತದಲ್ಲಿ ಮಾಡಿದ ಸಾಧನೆಯ ಕರ ಪತ್ರಗಳನ್ನು ಮನೆ ಮನೆಗೆ ಹಂಚಲಾಯಿತು.

ಈ ಸಂದರ್ಭದಲ್ಲಿ ಹಿರಿಯ ನಾಗರಿಕರ ಆರೋಗ್ಯ ಕ್ಷೇಮ ವಿಚಾರಿಸಿ, ಅವರನ್ನು ಥರ್ಮಲ್ ಸ್ಕ್ರೀನ್ ಮೂಲಕ ಉಷ್ಣಾಂಶ ಪರೀಕ್ಷಿಸಲಾಯಿತು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ, ನಗರ ಬಿಜೆಪಿ ಅಧ್ಯಕ್ಷ ಮನು ಮಂಜುನಾಥ್, ಜಿಲ್ಲಾ ಕಾರ್ಯದರ್ಶಿ ಸತೀಶ್, ವಾರ್ಡ್ ಕಾರ್ಯದರ್ಶಿ ಪ್ರಭು ಹಾಜರಿದ್ದರು.