ರಾಜ್ಯಪಾಲರನ್ನು ಕಾಡಿದ ಸೋಂಕು

03/08/2020

ಚೆನ್ನೈ ಆ.3 : ತಮಿಳುನಾಡು ರಾಜ್ಯಪಾಲರಿಗೂ ಕೊರೋನಾ ಸೋಂಕು ದೃಢವಾಗಿರುವುದು ವರದಿಯಾಗಿದೆ. ಬನ್ವಾರಿಲಾಲ್ ಪುರೋಹಿತ್ ಅವರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ರೋಗಲಕ್ಷಣ ರಹಿತ ಸೋಂಕಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.
ಮನೆಯಲ್ಲಿಯೇ ಐಸೊಲೇಷನ್ ನಲ್ಲಿರುವುದಕ್ಕೆ ವೈದ್ಯರು ಸಲಹೆ ನೀಡಿದ್ದಾರೆ. ಕಾವೇರಿ ಆಸ್ಪತ್ರೆಯ ವೈದ್ಯರ ತಂಡ ರಾಜ್ಯಪಾಲರ ಆರೋಗ್ಯದ ಬಗ್ಗೆ ಗಮನ ಹರಿಸಲಿದೆ.