ಲಡಾಕ್ ತಲುಪಿದ ರಾಖಿ ಪೋಸ್ಟ್

03/08/2020

ಬೆಂಗಳೂರು ಆ.3 : ಲಡಾಕ್ ಗಡಿಭಾಗದಲ್ಲಿರುವ 99 ಮಂದಿ ಸೈನಿಕರು ಸೇರಿದಂತೆ ಸೋದರರಿಗೆ 1,990 ಸಹೋದರಿಯರು ರಾಖಿ ಕಳುಹಿಸಿದ್ದಾರೆ. ರಾಖಿ ಪೋಸ್ಟನ್ನು ಜುಲೈ 26ರಂದು ಆರಂಭಿಸಲಾಗಿದ್ದು 30ಕ್ಕೆ ಕೊನೆ ಮಾಡಲಾಗಿತ್ತು. ಕೇವಲ 5 ದಿನಗಳಲ್ಲಿ ಅಭೂತಪೂರ್ವ ಪ್ರತಿಕ್ರಿಯೆ ಬಂದಿದ್ದು ಕೋವಿಡ್-19 ಸಮಯದಲ್ಲಿ ಜನರು ಹೊರಗೆ ಹೋಗಿ ಅಂಗಡಿಗಳಿಂದ ರಾಖಿ ಕಳುಹಿಸುವ ಬದಲು ಪೋಸ್ಟ್ ನಲ್ಲಿ ರಾಖಿ ಕಳುಹಿಸುವುದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎಂದು ಬೆಂಗಳೂರು ವಿಭಾಗದ ಪೋಸ್ಟ್ ಮಾಸ್ಟರ್ ಜನರಲ್ ಎಸ್.ರಾಜೇಂದ್ರ ಬಾಬು ಹೇಳಿದ್ದಾರೆ.
ಈ ವರ್ಷ ಇನ್ನು ಉಳಿದ ಹಬ್ಬ ಹರಿದಿನಗಳ ಸಂದರ್ಭದಲ್ಲಿ ಗಿಫ್ಟ್ ಮತ್ತು ಪಾರ್ಸೆಲ್ ಸೇವೆಗಳನ್ನು ಸಹ ಆರಂಭಿಸಲು ಇಲಾಖೆ ಚಿಂತನೆ ನಡೆಸುತ್ತಿದೆ ಎಂದರು.