ಸಹಕಾರ ಸಂಘ ಪುನಃಶ್ಚೇತನಗೊಳಿಸಲು ಅವಕಾಶ

03/08/2020

ಮಡಿಕೇರಿ ಆ. 3 : ತಾಲ್ಲೂಕು ಬೆಟ್ಟಗೇರಿ ಅರುವತ್ತೋಕ್ಲು ಸಹಕಾರ ದವಸ ಭಂಡಾರ, ಚೇರಂಬಾಣೆಯ ಐವತ್ತೊಕ್ಲು ಸಹಕಾರ ದವಸ ಭಂಡಾರ, ಕಾರುಗುಂದದ ಕಡಿಯತ್ತೂರು ಸಹಕಾರ ದವಸ ಭಂಡಾರ, ಚೇರಂಬಾಣೆ ಮಂದಪಂಡ ಫ್ಯಾಮಿಲಿ ಸಹಕಾರ ದವಸ ಭಂಡಾರ, ನೆಲಜಿಯ ದೊಡ್ಡ ಪುಲಿಕೋಟು ಸಹಕಾರ ದವಸ ಭಂಡಾರ, ಕಗ್ಗೋಡ್ಲು ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘ, ಸೋಮವಾರಪೇಟೆ ತಾಲ್ಲೂಕು ಗುಡ್ಡೆಹೊಸೂರು ಬಿದಿರು ಕೈಗಾರಿಕೆ ಸ.ಸಂ. ವಿರಾಜಪೇಟೆ ತಾಲ್ಲೂಕು ಹಾತೂರು ಶಾಲಾ ವಿದ್ಯಾರ್ಥಿಗಳ ಸಹಕಾರ ಸ್ಟೋರ್ಸ್, ಹುದಿಕೇರಿಯ ಜನತಾ ಹೈಸ್ಕೂಲ ಶಾಲಾ ವಿದ್ಯಾರ್ಥಿಗಳ ಸಹಕಾರ ಸ್ಟೋರ್ಸ್ ಮತ್ತು ಶ್ರೀಮಂಗಲ ಪದವಿ ಪೂರ್ವ ಶಾಲಾ ವಿದ್ಯಾರ್ಥಿಗಳ ಸಹಕಾರ ಸ್ಟೋರ್ಸ್ ಈ ಸಹಕಾರ ಸಂಘಗಳು 2020ರ ಮಾರ್ಚ್, 31 ಅಂತ್ಯಕ್ಕೆ ಕಾರ್ಯನಿರ್ವಹಿಸದೇ ಸ್ಥಗಿತಗೊಂಡಿರುವುದರಿಂದ, ಈ ಸಂಘಗಳನ್ನು ಸ್ಥಗಿತಗೊಂಡಿರುವ ಸಹಕಾರ ಸಂಘಗಳೆಂದು ಗುರುತಿಸಲಾಗಿದೆ. ಈ ಸಂಘಗಳನ್ನು ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959ರ ಪ್ರಕರಣ 72 ರನ್ವಯ ಸಮಾಪನೆಗೆ ಆದೇಶಿಸಲು ಉದ್ದೇಶಿಸಲಾಗಿದೆ.
ಆದ್ದರಿಂದ ಸ್ಥಗಿತ ಸಂಘವನ್ನು ಪುನಃಶ್ಚೇತನಗೊಳಿಸಲು ಆಸಕ್ತಿ ಹೊಂದಿರುವ ಸಂಘದ ಕಾರ್ಯವ್ಯಾಪ್ತಿಯ ಸದಸ್ಯರುಗಳು 15 ದಿವಸದೊಳಗೆ ಲಿಖಿತವಾಗಿ ತಮ್ಮ ಮನವಿ ಸಲ್ಲಿಸಬಹುದಾಗಿದೆ. ಒಂದು ವೇಳೆ ಪುನಃಶ್ಚೇತನಕ್ಕೆ ಯಾವುದೇ ಮನವಿಗಳು ಬಾರದಿದ್ದಲ್ಲಿ, ಆಸಕ್ತಿ ಇಲ್ಲವೆಂದು ಪರಿಗಣಿಸಿ, ಸಂಘದ ಸಮಾಪನೆಗಾಗಿ ಮುಂದಿನ ಕ್ರಮವಹಿಸಲಾಗುವುದು ಎಂದು ಮಡಿಕೇರಿ ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ರವಿಕುಮಾರ್ ಅವರು ಕೋರಿದ್ದಾರೆ.