ಬಲ್ಯಮುಂಡೂರು ಗ್ರಾಮದಲ್ಲಿ ಹುಲಿ ಹೆಜ್ಜೆ ಪ್ರತ್ಯಕ್ಷ : ಗ್ರಾಮಸ್ಥರಲ್ಲಿ ಆತಂಕ

03/08/2020

ಮಡಿಕೇರಿ ಆ. 3 : ಬಲ್ಯಮುಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಲ್ಯಮುಂಡೂರು ಗ್ರಾಮದ ಕೊಟ್ಟಂಗಡ ಅಯ್ಯಪ್ಪ ಅವರ ಮನೆ ಮುಂದೆ ರಾತ್ರಿ ವೇಳೆ ಹುಲಿ ಹೆಚ್ಚೆ ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.
ಆದ್ದರಿಂದ ಸುತ್ತು ಮುತ್ತಲಿನ ಗ್ರಾಮದವರು ತಮ್ಮ ದನಕರುಗಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳುವಂತೆ ವಿರಾಜಪೇಟೆ ತಾಲ್ಲೂಕು ಬಿಜೆಪಿ ಕೃಷಿ ಮೊರ್ಚಾದ ಸದಸ್ಯ ಅಯ್ಯಪ್ಪ ತಿಳಿಸಿದ್ದಾರೆ.