ದೇವಾಲಯದ ಘಂಟೆ ಬೀಳಿಸಿ ತೆರಳಿದ ಗಜರಾಜ : ಆತೂರು ಗ್ರಾಮದಲ್ಲೊಂದು ಅಪರೂಪದ ಘಟನೆ

03/08/2020

ಮಡಿಕೇರಿ ಆ. 3 : ತೋಟದ ಒಳಭಾಗದಲ್ಲಿರುವ ದೇವಾಲಯದ ಗೇಟನ್ನು ಸರಿಸಿ ಪ್ರವೇಶಿಸಿದ ಗಜರಾಯ ದೇವಾಲಯಕ್ಕೆ ಪ್ರದಕ್ಷಿಣೆ ಹಾಕಿ ಗಂಟೆಯನ್ನು ಕಳೆಕೆ ಬೀಳಿಸಿದ ಅಪರೂಪದ ಪ್ರಸಂಗ ಬೆಳಕಿಗೆ ಬಂದಿದೆ.
ಆತೂರು ತೋಟದಲ್ಲಿರುವ ಚಾಮುಂಡೇಶ್ವರಿ ಪಾಷಾಣ ಮೂರ್ತಿ, ಗುಳಿಗ ದೇವರ ದೇವಸ್ಥಾನಕ್ಕೆ ತೆರಳಿದ ಆನೆಯೊಂದು ದೇವಸ್ಥಾನದ ಗೇಟನ್ನು ಸೊಂಡಿಲಿನಿಂದ ಸರಿಸಿ ಒಳ ಪ್ರವೇಶಿಸಿ ಪ್ರದಕ್ಷಿಣೆ ಹಾಕಿ ದೇವಾಲಯದ ಹೊರಾಂಗಣದಲ್ಲಿ ನೇತು ಹಾಕಿದ್ದ ಗಂಟೆಯನ್ನು ಮುಟ್ಟಲು ಪ್ರಯತ್ನಿಸಿ ಅದನ್ನು ಕೆಳಗೆ ಬೀಳಿಸಿ ನಂತರ ತನ್ನ ಪಾಡಿಗೆ ತೋಟಕ್ಕೆ ತೆರಳಿದೆ.
ಇದನ್ನು ಗಮನಿಸಿದ ತೋಟದ ಕಾರ್ಮಿಕರು ಮಾಲೀಕರಿಗೆ ತಿಳಿಸಿದ್ದು, ಮಾಲೀಕರು ದೇವಸ್ಥಾನವನ್ನು ಪರಿಶೀಲಿಸಿದಾಗ ದೇವಾಲಯಕ್ಕೆ ಆನೆಯು ಯಾವುದೇ ಹಾನಿ ಮಾಡದೆ ತೆರಳಿರುವುದು ಕಂಡು ಬಂದಿದೆ.