ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್‍ನಿಂದ ಗುಡ್ಡಳ್ಳಿಯಲ್ಲಿ ಕೃಷಿ ನಾಟಿ ಜಾಗೃತಿ

03/08/2020

ಸೋಮವಾರಪೇಟೆ,ಆ.3: ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ ವತಿಯಿಂದ ಶಾಂತಳ್ಳಿ ಗ್ರಾಮದ ಗುಡ್ಡಳ್ಳಿಯಲ್ಲಿ ಕೃಷಿ ಜಾಗೃತಿ-ನಾಟಿ ಕಾರ್ಯಕ್ರಮ ನಡೆಯಿತು.
ಗುಡ್ಡಳ್ಳಿ ಗ್ರಾಮದ ಸಂತೋಷ್ ಅವರ ಗದ್ದೆಯಲ್ಲಿ ಆಯೋಜಿಸಿದ್ದ ನಾಟಿ ಕಾರ್ಯಕ್ರಮದಲ್ಲಿ ಮಾತನಾಡಿದ ಅಧ್ಯಕ್ಷ ಶ್ರೀನಿಧಿ ಲಿಂಗಪ್ಪ, ಸಂಸ್ಥೆಯ ವತಿಯಿಂದ ಯುವ ಜನಾಂಗವನ್ನು ಒಟ್ಟುಗೂಡಿಸಿ ನಾಟಿ ಮಾಡುವ ಮೂಲಕ ಕೃಷಿಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಕಳೆದೆರಡು ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ ಎಂದರು.
ನಾಟಿ ಕಾರ್ಯದಲ್ಲಿ ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ, ಅಸೋಸಿಯೇಷನ್ ಕಾರ್ಯದರ್ಶಿ ಸಜನ್ ಮಂದಣ್ಣ, ಪದಾಧಿಕಾರಿಗಳಾದ ವಿನಯ್, ಆದರ್ಶ್, ವಿಕಾಸ್, ಸ್ವಾಗತ್, ಕಿರಣ್, ಭರತ್, ಜೀವನ್, ಸಮರ್ಥ್, ಪ್ರದೀಪ್, ರಾಜೇಶ್, ಮಧುಕುಮಾರ್ ಸೇರಿದಂತೆ ಇತರರು ಭಾಗವಹಿಸಿದ್ದರು.