ಶಿಕ್ಷಕ ರಾಮಚಂದ್ರ ಮೂರ್ತಿಗೆ ಆತ್ಮೀಯ ಸನ್ಮಾನ

04/08/2020

ಮಡಿಕೇರಿ ಆ.4 : ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಸುಮಾರು 40 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ವಯೋ ನಿವೃತ್ತಿ ಹೊಂದಿದ ರಾಮಚಂದ್ರ ಮೂರ್ತಿಗೆ ಇಲಾಖೆ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಸೋಮವಾರಪೇಟೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಕೆ.ಪಾಂಡು, ಕೊಡಗು ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ, ಚೇತನ, ಸೋಮವಾರಪೇಟೆ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಎನ್.ಮಂಜುನಾಥ್, ವಾಲ್ನೂರು ಶಾಲೆಯ ಮುಖ್ಯ ಶಿಕ್ಷಕ ಎಚ್.ಕೆ. ಕುಮಾರ್, ಗುಡ್ಡೆಹೊಸೂರು ಶಾಲೆಯ ಮುಖ್ಯ ಶಿಕ್ಷಕ ಸಣ್ಣಸ್ವಾಮಿ. ಹೆಬ್ಬಾಲೆ ಶಾಲೆಯ ಮುಖ್ಯ ಶಿಕ್ಷಕರಾದ ಹೆಚ್.ಎಂ.ವೆಂಕಟೇಶ, ಬಿ.ಈ.ಓ. ಕಚೇರಿಯ ಪ್ರಾಥಮಿಕ ವಿಭಾಗದ ಶಿಕ್ಷಣ ಸಂಯೋಜಕ ಶಿವಲಿಂಗ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಕಾರ್ಯದರ್ಶಿ ಟಿ.ಕೆ. ಬಸವರಾಜ್. ಕ್ಲಷ್ಟರ್ ಸಂಪನ್ಮೂಲ ವ್ಯಕ್ತಿ ಚಿನ್ನಪ್ಪ. ಶಾಲಾ ಎಸ್‍ಡಿಎಂಸಿ. ಅಧ್ಯಕ್ಷ ಸುರೇಂದ್ರ. ಶಾಲಾ ಶಿಕ್ಷಕರಾದ ಮಹೇಶ್, ರಾಜಶೇಖರ, ಕುಮಾರ, ಧರ್ಮಪ್ಪ. ಸಹ ಶಿಕ್ಷಕಿ ಎಸ್.ಕೆ. ರಾಧಾ ವ್ಮತ್ತಿತರರು ಹಾಜರಿದ್ದರು.