ವಾಹನ ಕರಕಲು : ಯೋಧ ನಾಪತ್ತೆ
04/08/2020

ಶ್ರೀನಗರ ಆ.4 : ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಯೋಧನೋರ್ವ ನಾಪತ್ತೆಯಾಗಿದ್ದು, ಆತನ ವಾಹನ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಕಾಶ್ಮೀರದ ಕುಲ್ಗಾಮ್ ನಲ್ಲಿ ಈ ಘಟನೆ ನಡೆದಿದ್ದು, ಟೆರಿಟೋರಿಯಲ್ ಆರ್ಮಿ (ಟಿಎ-ಪ್ರಾದೇಶಿಕ ಸೈನ್ಯ) ಸೈನಿಕ ನಾಪತ್ತೆಯಾಗಿದ್ದು, ಉಗ್ರರು ಸೈನಿಕನನ್ನು ಅಪಹರಣ ಮಾಡಿರುವ ಕುರಿತು ಶಂಕೆ ವ್ಯಕ್ತವಾಗುತ್ತಿದೆ. ಪ್ರಸ್ತುತ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ವಾಹನ ಶೋಪಿಯಾನ್ ಜಿಲ್ಲೆಯ ನಿವಾಸಿ ಮುಜಾಫರ್ ಮನ್ಸೂರ್ ಎಂಬ ಹೆಸರಿನಲ್ಲಿ ನೋಂದಾವಣಿಯಾಗಿದೆ. ನಾಪತ್ತೆಯಾದ ಯೋಧ ಮನ್ಸೂರ್ ನನ್ನು ಅಧಿಕಾರಿಗಳು ಈ ವರೆಗೂ ಸಂಪರ್ಕಿಸಲು ಸಾಧ್ಯವಾಗಿಲ್ಲ. ಮೊಬೈಲ್ ಸ್ವಿಚ್ ಆಫ್ ಅಗಿದ್ದು, ಆತನ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ.
ಅಂತೆಯೇ ಈ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆಯಲಾಗುತ್ತಿದ್ದು, ಶೀಘ್ರ ಯೋಧನ ಪತ್ತೆ ಮಾಡುವುದಾಗಿ ಅಧಿಕಾರಿಗಳು ಹೇಳಿದ್ದಾರೆ ಎನ್ನಲಾಗಿದೆ.
