ಮಳೆ ತುರ್ತು ಸೇವೆಗೆ ಕೊಡಗು ರಕ್ಷಣಾ ವೇದಿಕೆ ಸಿದ್ಧ

04/08/2020

ಮಡಿಕೇರಿ ಆ.4 : ಧಾರಾಕಾರವಾಗಿ ಸುರಿಯುವ ಮಳೆಯ ಆರ್ಭಟ ಹಾಗೂ ಬೀಸುತ್ತಿರುವ ಗಾಳಿಯ ಪರಿಣಾಮದಿಂದ  ಕೆಲವೊಂದು ಸೂಕ್ಷ್ಮ ಸ್ಥಳಗಳಲ್ಲಿ ಅಪಾಯ ಸಂಭವಿಸುವ ಮುನ್ಸೂಚನೆ ಇದ್ದು ತುರ್ತು ಸೇವೆಗೆ ಕೊಡಗು ರಕ್ಷಣಾ ವೇದಿಕೆ ಸಿದ್ಧವಿದೆ ಎಂದು ವೇದಿಕೆಯ ಅಧ್ಯಕ್ಷ ಪವನ್ ಪೆಮ್ಮಯ್ಯ ತಿಳಿಸಿದ್ದಾರೆ. ಅಪಾಯದಲ್ಲಿರುವವರ ರಕ್ಷಣೆಗಾಗಿ ಸ್ವಯಂಸೇವಕರಾಗಿ ತೊಡಗಿಸಿಕೊಳ್ಳಲು ಇಚ್ಛೆ ಇರುವ ಸದಸ್ಯರು ಸಿದ್ಧರಿರಬೇಕು ಎಂದು ಅವರು ಮನವಿ ಮಾಡಿದ್ದಾರೆ.