ಹಾವುಗಳ ಸಂರಕ್ಷಕ “ವಾಟರ್ ಮ್ಯಾನ್” ಸ್ನೇಕ್ ಬಾಲು

04/08/2020

ಮಡಿಕೇರಿ ಆ.4 : ಸುಂಟಿಕೊಪ್ಪದ ಗ್ರಾಮ ಪಂಚಾಯಿತಿಯ ಪೌರ ಕಾರ್ಮಿಕರಾಗಿರುವ ಬಾಲು (ಬಾಲ ಚಂದ್ರ) ಅವರು ಕಳೆದ 14 ವರುಷಗಳಿಂದ 200 ಕ್ಕೂ ಹೆಚ್ಚಿನ ಹಾವುಗಳನ್ನು ಸಂರಕ್ಷಿಸಿ ಸುಂಟಿಕೊಪ್ಪ ಹಾಗೂ ಸುತ್ತ ಮುತ್ತಲಿನವರಿಗೆ ನೆರವಾಗುತ್ತಿದ್ದಾರೆ. ಯಾವುದೇ ಹಾವುಗಳನ್ನು ನೋಯಿಸಬೇಡಿ ಸಂರಕ್ಷಣೆಗೆ ನಾವಿದ್ದೇವೆ ಕರೆ ಮಾಡಿ ಎಂದು ವಾಟರ್ ಮ್ಯಾನ್ ಬಾಲು ಮನವಿ ಮಾಡುತ್ತಾರೆ. ಹಾವುಗಳು ಪತ್ತೆಯಾದಲ್ಲಿ ತಮ್ಮ ಮೊ.ಸಂ : 93800 98500 ಗೆ ಕರೆ ಮಾಡುವಂತೆ ತಿಳಿಸಿದ್ದಾರೆ.