ತಂದೆ, ತಾಯಿಯನ್ನು ದೊಣ್ಣೆಯಿಂದ ಬಡಿದು ಹತ್ಯೆ ಮಾಡಿದ ಆರೋಪಿ ಬಂಧನ : ಕೋಕೇರಿಯಲ್ಲಿ ಘಟನೆ

August 4, 2020

ಮಡಿಕೇರಿ ಆ.4 : ಕುಡಿದ ಅಮಲಿನಲ್ಲಿ ತಂದೆ, ತಾಯಿಯನ್ನೇ ದೊಣ್ಣೆಯಿಂದ ಬಡಿದು ಹತ್ಯೆ ಮಾಡಿದ ಪಾಪಿ‌ ಪುತ್ರನನ್ನು ನಾಪೋಕ್ಲು ಪೊಲೀಸರು ಬಂಧಿಸಿದ್ದಾರೆ.
ಅಯ್ಯಪ್ಪ(26) ಎಂಬಾತನೇ ಬಂಧಿತ ಆರೋಪಿ. ರಾಜು(70) ಹಾಗೂ ಗೌರಿ (65) ಎಂಬುವವರೇ ಮೃತ ದುರ್ದೈವಿಗಳು. ನಾಪೋಕ್ಲು ಸಮೀಪ ಕೋಕೇರಿ ಗ್ರಾಮದ ತೋಟವೊಂದರಲ್ಲಿ ಲೈನ್ ಮನೆಯಲ್ಲಿ ವಾಸವಾಗಿದ್ದ ಕುಟುಂಬದಲ್ಲಿ ಕಲಹ ಏರ್ಪಟ್ಟು ಕೊಲೆಯಲ್ಲಿ ಅಂತ್ಯವಾಗಿದೆ.

error: Content is protected !!