ಕೊಡಗು ಉಸ್ತುವಾರಿ ಸಚಿವರ ಆಶೀರ್ವಾದ ಪಡೆದ ರಾಜ್ಯ ಬಿಜೆಪಿ ಉಪಾಧ್ಯಕ್ಷ ಪ್ರತಾಪ್ ಸಿಂಹ

04/08/2020

ಮಡಿಕೇರಿ ಆ.4 : ಭಾರತೀಯ ಜನತಾ ಪಾರ್ಟಿಯ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಸಂಸದ ಪ್ರತಾಪ್ ಸಿಂಹ ಅವರು ವಸತಿ ಸಚಿವ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ಬಿಜೆಪಿ ಸಂಘಟನೆ ಕುರಿತು ಚರ್ಚಿಸಿದ ಉಭಯ ನಾಯಕರು ರಾಜ್ಯದ ಆಗುಹೋಗುಗಳ ಬಗ್ಗೆಯೂ ಮಾತನಾಡಿದರು. ಪಕ್ಷದ ಶಕ್ತಿಯನ್ನು ಹೆಚ್ಚಿಸುವ ಕುರಿತು ಪ್ರತಾಪ್ ಸಿಂಹ ವಿಶ್ವಾಸದ ಮಾತುಗಳನ್ನಾಡಿದರು.