ಕುಟ್ಟ – ಕೇರಳ ಸಂಪರ್ಕ ರಸ್ತೆ ನಿರ್ಬಂಧ ತೆರವಿಗೆ ಕೊಡಗು ರಕ್ಷಣಾ ವೇದಿಕೆ ಒತ್ತಾಯ

04/08/2020

ಮಡಿಕೇರಿ ಆ.4 : ಕೊರೋನಾ ಕಾರಣ ನೀಡಿ ಕೇರಳ ಮತ್ತು ಕೊಡಗು ಗಡಿಯ ಕುಟ್ಟ ಗ್ರಾಮದ ರಸ್ತೆ ಸಂಪರ್ಕವನ್ನು ನಿರ್ಬಂಧಿಸಲಾಗಿದ್ದು, ಇದರಿಂದ ಸೋಮವಾರಪೇಟೆ ರೈತರಿಗೆ ನಷ್ಟವಾಗಿದೆ ಎಂದು ಕೊಡಗು ರಕ್ಷಣಾ ವೇದಿಕೆ ಅಭಿಪ್ರಾಯಪಟ್ಟಿದೆ.
ಮಡಿಕೇರಿಯಲ್ಲಿ ಮಾತನಾಡಿದ ವೇದಿಕೆಯ ಅಧ್ಯಕ್ಷ ಪವನ್ ಪೆಮ್ಮಯ್ಯ ರೈತರು ತಾವು ಬೆಳೆದ ತರಕಾರಿ ಇನ್ನಿತರ ಬೆಳೆಗಳನ್ನು ಕೇರಳಕ್ಕೆ ಕೊಂಡೊಯ್ದು ಮಾರಾಟ ಮಾಡುತ್ತಿದ್ದರು. ಆದರೆ ಈಗ ಕುಟ್ಟ ರಸ್ತೆ ಸಂಪರ್ಕವಿಲ್ಲದೆ ಹೆಚ್.ಡಿ.ಕೋಟೆ ಮೂಲಕ 350 ಕಿ.ಮೀ ಕ್ರಮಿಸಬೇಕಾಗಿದೆ ಎಂದರು.