ಜಿ.ಪಂ.ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ರೂ. 13821.21 ಲಕ್ಷ ಅನುದಾನ ಹಂಚಿಕೆ

04/08/2020

ಮಡಿಕೇರಿ ಆ. 4 : ಕೊಡಗು ಜಿಲ್ಲಾ ಪಂಚಾಯತಿಗೆ 2020-21 ನೇ ಸಾಲಿಗೆ ಇಲಾಖಾವಾರು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ರೂ. 13821.21 ಲಕ್ಷ ರೂ ಹಂಚಿಕೆ ಮಾಡಲಾಗಿದೆ ಎಂದು ಜಿ.ಪಂ.ಸಿಇಒ ಕೆ.ಲಕ್ಷ್ಮಿಪ್ರಿಯ ಅವರು ತಿಳಿಸಿದ್ದಾರೆ.
ತಾಲ್ಲೂಕು ಪಂಚಾಯತಿ ಕಾರ್ಯಕ್ರಮಗಳಿಗೆ ರೂ. 19017.28 ಲಕ್ಷ ಮತ್ತು ಗ್ರಾಮ ಪಂಚಾಯತಿ ಕಾರ್ಯಕ್ರಮಗಳಿಗೆ ರೂ.56 ಲಕ್ಷ ಸೇರಿದಂತೆ ಒಟ್ಟು ರೂ.32894.49 ಲಕ್ಷ ನಿಗಧಿಯಾಗಿದ್ದು, ಪ್ರಸಕ್ತ ಸಾಲಿಗೆ ರೂ. 1341.58 ಲಕ್ಷ ಅನುದಾನ ಹೆಚ್ಚುವರಿಯಾಗಿ ಹಂಚಿಕೆಯಾಗಿದೆ ಎಂದು ಜಿ.ಪಂ.ಸಿಇಒ ಅವರು ಹೇಳಿದ್ದಾರೆ.
ಜಿಲ್ಲಾ ಪಂಚಾಯತ್ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ವೇತನ ಭತ್ಯೆಗಳಿಗಾಗಿ ಒಟ್ಟಾರೆಯಾಗಿ ನಿಗಧಿಪಡಿಸಿದ ಅನುದಾನದ ವಿವರ ಇಂತಿದೆ.
ಶಿಕ್ಷಣ ಇಲಾಖೆಗೆ ಒಟ್ಟು ರೂ. 4516.40 ಲಕ್ಷ ನಿಗಧಿಪಡಿಸಲಾಗಿದ್ದು ಇದರಡಿ ಪ್ರಮುಖವಾಗಿ ಸಾರ್ವತ್ರಿಕ ಶಿಕ್ಷಣ ಉತ್ತೇಜನಕ್ಕಾಗಿ ಅಕ್ಷರ ದಾಸೋಹ ಕಾರ್ಯಕ್ರಮಕ್ಕೆ ರೂ. 1331.18 ಲಕ್ಷ ಅನುದಾನ, ವೇತನ ಮತ್ತು ಇತರೆ ಕಾರ್ಯಕ್ರಮಗಳಿಗಾಗಿ ರೂ.3180.72 ಲಕ್ಷ ನಿಗಧಿಯಾಗಿದೆ.
ಲೋಕ ಶಿಕ್ಷಣ ಕಾರ್ಯಕ್ರಮಗಳಿಗಾಗಿ ರೂ.12.27 ಲಕ್ಷ ಅನುದಾನ ನಿಗಧಿಯಾಗಿದೆ. ಯುವಜನ ಸೇವೆ ಹಾಗೂ ಕ್ರೀಡಾ ಇಲಾಖೆಗೆ ಒಟ್ಟು ರೂ. 205.75 ಲಕ್ಷ ಅನುದಾನ ನಿಗಧಿಯಾಗಿದೆ. ಕ್ರೀಡಾ ಶಾಲೆ/ ವಸತಿ ನಿಲಯಗಳಿಗಾಗಿ ರೂ. 76 ಲಕ್ಷ ಕ್ರೀಡಾ ಕೂಟ ರ್ಯಾಲಿ ಸಂಘಟನೆಗಾಗಿ ರೂ. 40 ಲಕ್ಷ, ಕ್ರೀಡಾಂಗಣ ನಿರ್ವಹಣೆಗಾಗಿ ರೂ. 57.77 ಲಕ್ಷ ನಿಗಧಿಪಡಿಸಲಾಗಿದೆ. ವೇತನ ಮತ್ತು ಇತರೆ ಕಾರ್ಯಕ್ರಮಗಳಿಗಾಗಿ ರೂ. 31.98 ಲಕ್ಷ ನಿಗಧಿಪಡಿಸಿದೆ.
ವೈದ್ಯಕೀಯ ಮತ್ತು ಜನಾರೋಗ್ಯ ಇಲಾಖೆಗೆ ಒಟ್ಟು ರೂ. 2224.62 ಲಕ್ಷ ನಿಗಧಿಯಾಗಿದ್ದು ಕಟ್ಟಡ ನಿರ್ಮಾಣ ಮತ್ತು ನಿರ್ವಹಣೆಗೆ (ಅಯುಷ್ ಇಲಾಖೆ ಸೇರಿದಂತೆ) ರೂ. 175 ಲಕ್ಷ, ಆಂಬ್ಯುಲೆನ್ಸ್ ಖರೀದಿಗಾಗಿ ರೂ.43.15 ಲಕ್ಷ ನಿಗಧಿಪಡಿಸಲಾಗಿದೆ. ವೇತನ ಮತ್ತು ಇತರೆ ಕಾರ್ಯಕ್ರಮಗಳಿಗಾಗಿ ರೂ. 2006.47 ಲಕ್ಷ ನಿಗಧಿಪಡಿಸಿದೆ. ಕುಟುಂಬ ಕಲ್ಯಾಣದಡಿ ವೇತನ ಮತ್ತು ಇತರೆ ಕಾರ್ಯಕ್ರಮಗಾಗಿ ರೂ. 1461.47 ಲಕ್ಷ ಅನುದಾನ ನಿಗಧಿಪಡಿಸಿದೆ. ಆಯುಷ್ ಇಲಾಖೆ ರೂ.165.09 ಲಕ್ಷ ಅನುದಾನ ನಿಗಧಿಪಡಿಸಿದೆ.
ಸಮಾಜ ಕಲ್ಯಾಣ ಇಲಾಖೆ (ಪರಿಶಿಷ್ಟ ಜಾತಿ ಕಲ್ಯಾಣ) ವಿದ್ಯಾರ್ಥಿ ವೇತನ, ವಿದ್ಯಾರ್ಥಿ ನಿಲಯಗಳ ನಿರ್ವಹಣೆ, ವೇತನ ಮತ್ತು ಇತರೆ ಕಾರ್ಯಕ್ರಮಗಳಿಗೆ ರೂ. 843.64 ಲಕ್ಷ ಅನುದಾನ ನಿಗಧಿಪಡಿಸಿದೆ.
ಪರಿಶಿಷ್ಟ ಪಂಗಡದ ಇಲಾಖೆಯಡಿ ವಿದ್ಯಾರ್ಥಿ ವೇತನ, ವಿದ್ಯಾರ್ಥಿ ನಿಲಯಗಳ ನಿರ್ವಹಣೆ, ವೇತನ ಮತ್ತು ಇತರೆ ಕಾರ್ಯಕ್ರಮಗಳಿಗೆ ರೂ. 864.36 ಲಕ್ಷ ಅನುದಾನ ನಿಗಧಿಪಡಿಸಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ವಿದ್ಯಾರ್ಥಿ ನಿಲಯಗಳ ನಿರ್ವಹಣೆ, ಇತರೆ ರಿಯಾಯಿತಿಗಳು, ಕಟ್ಟಡಗಳ ನಿರ್ವಹಣೆ, ವೇತನ ಮತ್ತು ಇತರೆ ಕಾರ್ಯಕ್ರಮಗಳಿಗೆ ರೂ. 1235.84 ಲಕ್ಷ ಅನುದಾನ ನಿಗಧಿಪಡಿಸಿದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾ ಕಾರ್ಯಕ್ರಮಗಳಿಗೆ ರೂ. 114.64 ಲಕ್ಷ ಅನುದಾನ ನಿಗಧಿಪಡಿಸಲಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ವೇತನ ಮತ್ತು ಇತರೆ ವೆಚ್ಚಗಳಿಗಾಗಿ ರೂ. 50.03 ಲಕ್ಷ ನಿಗಧಿಪಡಿಸಿದೆ. ವಿಕಲಚೇತನ ಮತ್ತು ಹಿರಿಯ ನಾಗರಿಕರ ಕಲ್ಯಾಣ ಕಾರ್ಯಕ್ರಮಕ್ಕೆ ರೂ. 8 ಲಕ್ಷ ಅನುದಾನ ನಿಗಧಿಪಡಿಸಿದೆ.
ಕೃಷಿ ಇಲಾಖೆಯಡಿ ಕೃಷಿ ಯೋಜನೆಗಳು, ಕೃಷಿ ಕ್ಷೇತ್ರ, ಕಟ್ಟಡಗಳ ನಿರ್ವಹಣೆ ಮತ್ತು ವೇತನ ಹಾಗೂ ಇತರೆ ಕಾರ್ಯಕ್ರಮಗಳಿಗೆ ರೂ. 158.24 ಲಕ್ಷ ಅನುದಾನ ನಿಗಧಿಪಡಿಸಿದೆ. ಭೂಸಾರ ಮತ್ತು ಜಲಸಂರಕ್ಷಣೆಯಡಿ ವೇತನ ಮತ್ತು ಇತರೆ ವೆಚ್ಚಗಳಿಗಾಗಿ ರೂ. 46.33 ಲಕ್ಷ ನಿಗಧಿಪಡಿಸಿದೆ.
ತೋಟಗಾರಿಕೆ ಇಲಾಖೆಯಡಿ ಜೇನು ಕೃಷಿಗೆ ರೂ.54.01 ಲಕ್ಷ, ಹನಿ ನೀರಾವರಿ, ತೆಂಗು ಬೀಜ ಸಂರಕ್ಷಣೆ, ಎಣ್ಣೆ ತಾಳೆ ವ್ಯವಸಾಯ, ಕಟ್ಟಡ ನಿರ್ವಹಣೆ, ವೇತನ ಮತ್ತು ಇತರೆ ಕಾರ್ಯಕ್ರಮಗಳಿಗೆ ರೂ. 388.10 ಲಕ್ಷ ನಿಗಧಿಪಡಿಸಿದೆ.
ಪಶುಸಂಗೋಪನೆ ಇಲಾಖೆಯಡಿ ಕಟ್ಟಡಗಳ ನಿರ್ವಹಣೆಗಾಗಿ ರೂ.50 ಲಕ್ಷ, ಔಷಧಿ ರಾಸಾಯನಿಕ ಖರೀದಿ, ವೇತನ ಮತ್ತು ಇತರೆ ಕಾರ್ಯಕ್ರಮಗಳಿಗೆ ರೂ. 182.06 ಲಕ್ಷ ನಿಗಧಿಪಡಿಸಿದೆ.

ಮೀನುಗಾರಿಕೆ ಇಲಾಖೆಯಡಿ ಕಟ್ಟಡ ಕಾಮಗಾರಿಗಳಿಗಾಗಿ ರೂ.24.75 ಲಕ್ಷ, ಒಳನಾಡು ಮೀನುಗಾರಿಕೆ ಅಭಿವೃದ್ಧಿ, ಮೀನುಮಾರಾಟಕ್ಕೆ ಸಹಾಯ, ವೇತನ ಮತ್ತು ಇತರೆ ಕಾರ್ಯಕ್ರಮಗಳಿಗಾಗಿ ರೂ. 116.66 ಲಕ್ಷ ಅನುದಾನ ನಿಗಧಿಪಡಿಸಿದೆ.

ಸಾಮಾಜಿಕ ಅರಣ್ಯ ಇಲಾಖೆಯಡಿ ಸಾಮಾಜಿಕ ಅರಣ್ಯ ಕಾರ್ಯಕ್ರಮಕ್ಕೆ ರೂ.58.49 ಲಕ್ಷ ಕಟ್ಟಡಗಳ ನಿರ್ವಹಣೆ, ವೇತನ ಮತ್ತು ಇತರೆ ವೆಚ್ಚಗಳಿಗಾಗಿ ರೂ. 161 ಲಕ್ಷ ನಿಗಧಿಪಡಿಸಿದೆ.
ಸಹಕಾರ ಇಲಾಖೆಗೆ ರೂ. 9 ಲಕ್ಷ ಗ್ರಾಮೋದ್ಯಮ ಮತ್ತು ಸಣ್ಣ ಉದ್ಯಮಗಳಿಗೆ ರೂ. 43.43 ಲಕ್ಷ ಮತ್ತ ಕೈಮಗ್ಗ ಇಲಾಖೆಗೆ ರೂ. 19.92 ಲಕ್ಷ, ರೇಷ್ಮೆ ಇಲಾಖೆಗೆ ರೂ. 42.57 ಲಕ್ಷ ನಿಗಧಿಪಡಿಸಿದೆ.
ಕಲೆ ಮತ್ತು ಸಂಸ್ಕøತಿ ಇಲಾಖೆಗೆ ಬಯಲು ರಂಗ ಮಂದಿರ ನಿರ್ಮಾಣಕ್ಕಾಗಿ ರೂ. 19.18 ಲಕ್ಷ ಅನುದಾನ ನಿಗಧಿಪಡಿಸಿದೆ. ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳಿಗೆ ರೂ. 256.37 ಲಕ್ಷ, ಜಿಲ್ಲಾ ಯೋಜನಾ ಘಟಕದ ನಿರ್ವಹಣೆಗೆ ರೂ. 43.74 ಲಕ್ಷ, ಎನ್‍ಆರ್‍ಡಿಎಂಎಸ್. ರೂ. 7 ಲಕ್ಷ, ಕಾರ್ಮಿಕ ಮತ್ತು ಉದ್ಯೋಗ ಕಾರ್ಯಕ್ರಮಗಳಿಗೆ ರೂ. 64.07 ಲಕ್ಷ ನಿಗಧಿಪಡಿಸಿದೆ. ಮಡಿಕೇರಿ ತಾಲ್ಲೂಕು ಪಂಚಾಯತ್ ಕಚೇರಿ ಕಟ್ಟಡ ನಿರ್ಮಾಣಕ್ಕಾಗಿ ರೂ. 75.41 ಲಕ್ಷ ನಿಗಧಿಪಡಿಸಿದೆ.
ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯಿಂದ ಅನುಷ್ಠ್ಟಾನಗೊಳಿಸುವ ಸಣ್ಣ ನೀರಾವರಿ ಯೋಜನೆಯಡಿ ಕೆರೆಗಳ ಅಭಿವೃದ್ಧಿಗಾಗಿ ರೂ. 100.93 ಲಕ್ಷ ಇತರೆ ಕಾರ್ಯಕ್ರಮಗಳಿಗಾಗಿ ರೂ. 15.14 ಲಕ್ಷ ನಿಗಧಿಪಡಿಸಿದೆ. ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯ ಸಿಬ್ಬಂದಿ ವೇತನ, ಇತರೆ ವೆಚ್ಚಗಳಿಗಾಗಿ ರೂ. 226.58 ಲಕ್ಷ ಮತ್ತು ಪಂಚಾಯತ್ ರಾಜ್ ಎಂಜಿನಿಯರಿಂಗ್ ಸರ್ಕಾರಿ ಕಟ್ಟಡಗಳ ದುರಸ್ಥಿಗಾಗಿ ರೂ. 84.53 ಲಕ್ಷ ನಿಗಧಿಪಡಿಸಿದೆ ಎಂದು ಜಿ.ಪಂ.ಸಿಇಒ ಕೆ.ಲಕ್ಷ್ಮಿ ಪ್ರಿಯ ಅವರು ತಿಳಿಸಿದ್ದಾರೆ.