ಗಾಳಿಬೀಡು ಗ್ರಾಮದಲ್ಲಿ ಒಂದೇ ದಿನ 6 ಮಂದಿ ಸೋಂಕಿತರು ಪತ್ತೆ

04/08/2020

ಮಡಿಕೇರಿ ಆ.4 : ಮಡಿಕೇರಿ ತಾಲ್ಲೂಕಿನ ಗಾಳಿಬೀಡು ಗ್ರಾಮದಲ್ಲಿ ಒಂದೇ ದಿನ 6 ಮಂದಿ ಕೊರೋನಾ ಸೋಂಕಿತರು ಪತ್ತೆಯಾಗಿದ್ದಾರೆ. ಇಂದು ಸಂಜೆ ಜಿಲ್ಲಾಡಳಿತ ಹೊರಡಿಸಿರುವ ಪ್ರಕಟಣೆಯಲ್ಲಿ 14 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ ಎಂದು ತಿಳಿಸಲಾಗಿದೆ. ಇವರಲ್ಲಿ ಗಾಳಿಬೀಡು ಗ್ರಾಮದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಆರು ಮಂದಿ ಸೋಂಕಿತರು ಚಿಕ್ಕಮಗಳೂರು ಸಂಪರ್ಕ ಹೊಂದಿದ್ದರು ಎಂದು ಜಿಲ್ಲಾಡಳಿತ ತಿಳಿಸಿದೆ.