ಕೊಡಗಿನಲ್ಲಿ ಸೋಂಕಿತರ ಸಂಖ್ಯೆ 560ಕ್ಕೆ ಏರಿಕೆ

04/08/2020

ಮಡಿಕೇರಿ ಆ. 4 : ಮಂಗಳವಾರ ಸಂಜೆ 4 ಗಂಟೆಯ ವೇಳೆಗೆ ಜಿಲ್ಲೆಯಲ್ಲಿ 14 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದೆ.
ಮಡಿಕೇರಿಯ ಗಾಳೀಬೀಡುವಿನ ಮೊಣ್ಣಂಗೇರಿಯ 79 ವರ್ಷದ ಪುರುಷ, 60 ಮತ್ತು 33 ವರ್ಷದ ಮಹಿಳೆ, 6 ವರ್ಷದ ಬಾಲಕ, 28 ವರ್ಷದ ಮಹಿಳೆ ಮತ್ತು 37 ವರ್ಷದ ಪುರುಷ.
ಸೋಮವಾರಪೇಟೆಯ ಅಬ್ಬೂರು ಕಟ್ಟೆ ಯಲಕ್ನೂರುವಿನ 21 ಮತ್ತು 49 ವರ್ಷದ ಮಹಿಳೆ.
ಸೋಮವಾರಪೇಟೆ ಬಸವನಹಳ್ಳಿಯ ಮೋರಿಕಲ್ಲುವಿನ 38 ವರ್ಷದ ಮಹಿಳೆ, 8 ಮತ್ತು 6 ವರ್ಷದ ಬಾಲಕಿ.
ಬೆಂಗಳೂರು ಪ್ರಯಾಣದ ಇತಿಹಾಸ ಹೊಂದಿರುವ 28 ವರ್ಷದ ಪುರುಷ.
ಮಡಿಕೇರಿಯ ಕನ್ನಂಡಬಾಣೆಯ 26 ವರ್ಷದ ಪುರುಷ ಮತ್ತು 64 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿನ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 560 ಆಗಿದ್ದು, 342 ಮಂದಿ ಗುಣಮುಖರಾಗಿದ್ದಾರೆ. 208 ಸಕ್ರಿಯ ಪ್ರಕರಣಗಳಿದ್ದು, 10 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 151 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.