ಮಟನ್‍ಗಿಂತಲೂ ಅಧಿಕ ಬೆಲೆಯಲ್ಲಿ ಮಾರಾಟವಾಗುತ್ತಿರುವ ಬೇರಣಬೆ

04/08/2020

ಮಡಿಕೇರಿ ಆ. 4 : ಮಳೆಗಾಲದಲ್ಲಿ ಕಾಣಸಿಗುವ ಅಣಬೆಗಳಿಗೆ ಮಾಂಸಕ್ಕಿತಂಲೂ ಅಧಿಕ ಬೇಡಿಕೆ ಬೆಲೆ ಕಂಡುಬರುತ್ತಿದ್ದು, ಸಂತೆ ದಿನವಾದ ಸೋಮವಾರಂದು ಪಟ್ಟಣದಲ್ಲಿ ಬೇರಣಬೆಯ ವ್ಯಾಪಾರ ಜೋರಾಗಿತ್ತು.
ಅರಣ್ಯ, ಬಾಣೆಕಾಡು ಪ್ರದೇಶದಲ್ಲಿ ಉಗಮಿಸುವ ಬೇರಣಬೆಗಳನ್ನು ಸಂಗ್ರಹಿಸುವ ಗ್ರಾಮೀಣ ಪ್ರದೇಶದ ಮಂದಿ ಪಟ್ಟಣಕ್ಕೆ ತಂದು ವರ್ತಕರಿಗೆ ಮಾರಾಟ ಮಾಡುತ್ತಾರೆ. ಇದರಿಂದ ಖರೀದಿಸುವ ವರ್ತಕರು ನಂತರ ಗ್ರಾಹಕರಿಗೆ ಮಾರುತ್ತಿದ್ದು, ಕುರಿ ಮಾಂಸಕ್ಕಿಂತಲೂ ಅಧಿಕ ದರದಲ್ಲಿ ಮಾರಾಟವಾಗುತ್ತಿದೆ.