ಓಂಕಾರೇಶ್ವರ ದೇವಾಲಯದ ಬಳಿ ಬರೆ ಕುಸಿತ

04/08/2020

ಮಡಿಕೇರಿ ಆ. 4 : ಜಿಲ್ಲೆಯಲ್ಲಿ ಬಿದ್ದ ಭಾರೀ ಮಳೆಯಿಂದ ನಗರದ ಓಂಕಾರೇಶ್ವರ ದೇವಾಲಯಕ್ಕೆ ತೆರಳುವ ರಸ್ತೆ ಬದಿಯಲ್ಲಿ ಬರೆ ಬರೆ ಕುಸಿತ ಗೊಂಡಿದ್ದು, ಕೆಲಕಾಲ ರಸ್ತೆ ಸಂಪರ್ಕ ಕಡಿತಗೊಂಡಿತ್ತು.
ಬರೆಯಿಂದ ಮರದ ಕೊಂಬೆ ಸಹಿತ ಮಣ್ಣು ಧರೆಗುರುಳಿದರಿಂದ ಜನರು ಆತಂಕಕ್ಕೆ ಒಳಗಾದರು. ನಂತರ ಜೆಸಿಬಿ ಮೂಲಕ ಮಣ್ಣನ್ನು ತೆರವು ಮಾಡಿ ಸಂಚಾರಕ್ಕೆ ಮುಕ್ತಗೊಳಿಸಲಾಯಿತು.