ಇಗೋಡ್ಲು ಪೈಸಾರಿಯಲ್ಲಿ ಬರೆ ಕುಸಿತ : ಎರಡು ಮನೆಗಳಿಗೆ ಹಾನಿ

05/08/2020

ಸುಂಟಿಕೊಪ್ಪ, ಆ.5 : ಮಾದಾಪುರ ಇಗೋಡ್ಲು ಬೆಟ್ಟ ಪೈಸಾರಿಯಲ್ಲಿ ಬರೆ ಕುಸಿತಗೊಂಡು 2 ಮನೆಗಳಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.
ಮಾದಾಪುರ ಭಾಗದಲ್ಲಿ ಕಳೆದ 2 ದಿನಗಳಿಂದ ಎಡೆಬಿಡದೆ ಬಾರೀ ಗಾಳಿ ಮಳೆಯ ಸುರಿಯಲಾರಂಭಿಸಿದ್ದು ಇಗೋಡ್ಲು ಬೆಟ್ಟ ಪೈಸಾರಿಯ ನಿವಾಸಿ ಬೆಳಿಯಪ್ಪ ಹಾಗೂ ಪೊನ್ನಪ್ಪ ಎಂಬವರ ಮನೆಯ ಹಿಂಬದಿಯ ಬರೆ ಕುಸಿತಗೊಂಡಿದ್ದು ಮನೆ ಹಿಂಭಾಗ ಸಂಪೂರ್ಣ ಅಪಾಯದ ಅಂಚಿನಲ್ಲಿದೆ ಗಾಳಿ ಮಳೆಯು ಇದೇ ರೀತಿ ಮುಂದುವರೆದಲ್ಲಿ ಮನೆಯು ಸಂಪೂರ್ಣ ಹಾನಿಗೊಳ್ಳಲಿದೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.