ಸುಂಟಿಕೊಪ್ಪದ ಜನತಾ ಕಾಲೋನಿ ನಿವಾಸಿಗಳಿಗೆ ಕಿಟ್ ವಿತರಣೆ

05/08/2020

ಸುಂಟಿಕೊಪ್ಪ,ಆ.5: ಪಟ್ಟಣದ ಹೃದಯಭಾಗದಲ್ಲಿರುವ ಜನತಾ ಕಾಲೋನಿ ವ್ಯಕ್ತಿಯೋರ್ವರಲ್ಲಿ ಕರೋನಾ ಸೋಂಕು ಪತ್ತೆಯಾಗಿ ಕಾಲೋನಿಯನ್ನು ಸಿಲ್‍ಡೌನ್‍ಗಳಿಸಲಾಗಿದ್ದು, ಈ ಭಾಗದ ಪಂಚಾಯಿತಿ ಮಾಜಿ ಸದಸ್ಯರುಗಳು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಹಾರ ಕಿಟ್ ವಿತರಿಸಿದರು.
ಸುಂಟಿಕೊಪ್ಪ 1ನೇ ವಿಭಾಗದ ಜನತಾ ಕಾಲೋನಿಯಲ್ಲಿ ಕರೋನಾ ಸೋಂಕು 13 ಮನೆಗಳನ್ನು ಸಿಲ್‍ಡೌನ್‍ಗೊಳಿಸಲಾಗಿದ್ದು, ಗ್ರಾ.ಪಂ.1ನೇ ವಿಭಾಗದ ಮಾಜಿ ಸದಸ್ಯರುಗಳಾದ ಜಿ.ಜಿ.ಹೇಮಂತ್ ಕುಮಾರ್, ಎ.ಶ್ರೀಧರ್ ಕುಮಾರ್, ಪಂಚಾಯಿತಿ ಪಿಡಿಓ ವೇಣುಗೋಪಾಲ್ ಅಂಬೇಡ್ಕರ್ ಸಂಘದ ಅಧ್ಯಕ್ಷ ಎಂ.ಎಸ್.ರವಿ ಅವರು ಜನತಾ ಕಾಲೋನಿಯ ದಿನಸಿ ಹಾಗೂ ತರಕಾರಿ ಸಾಮಾಗ್ರಿಗಳ ಕಿಟ್‍ಗಳನ್ನು ವಿತರಿಸಿದರು.