ಕತ್ತಲೆಕಾಡು–ಸಿದ್ದಾಪುರ ಮಾರ್ಗದಲ್ಲಿ ಭೂಕುಸಿತ : ವಾಹನ ಸಂಚಾರ ನಿರ್ಬಂಧ : ಬದಲಿ ರಸ್ತೆಯಲ್ಲಿ ಸಂಚರಿಸಲು ಮನವಿ

05/08/2020

ಮಡಿಕೇರಿ ಆ. 5 : ಮಡಿಕೇರಿ – ಚೆಟ್ಟಳ್ಳಿ ರಸ್ತೆಯಲ್ಲಿ ಕಾಂಕ್ರಿಟೀಕರಣ ಕಾಮಗಾರಿ ನಡೆಸುವ ಸಂಬಂಧ ಅಬ್ಬಿಯಾಲದಿಂದ ಚೆಟ್ಟಳ್ಳಿವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಈ ಭಾಗದ ಸ್ಥಳೀಯರು ಕತ್ತಲೆಕಾಡು – ಸಿದ್ದಾಪುರ ಮಾರ್ಗದಲ್ಲಿ ವಾಹನಗಳ ಮೂಲಕ ಸಂಚರಿಸುತ್ತಿದ್ದು, ಹಾಲಿ ಈ ಭಾಗದಲ್ಲಿ ಭೂಕುಸಿತವಾಗಿರುವುದರಿಂದ ಸಾರ್ವಜನಿಕ ಹಿತಾಸಕ್ತಿಯಿಂದ ಈ ಭಾಗದಲ್ಲಿ ತಾತ್ಕಾಲಿಕವಾಗಿ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ.

ಸಾರ್ವಜನಿಕರು ಬದಲಿ ರಸ್ತೆಯಾದ ಹಾಕತ್ತೂರು – ಮರಗೋಡು – ಸಿದ್ದಾಪುರ ಮಾರ್ಗವನ್ನು ಬಳಸಬಹುದಾಗಿದೆ.