ಭಾಗಮಂಡಲದಲ್ಲಿ ಜಲಾವೃತ : ಮಡಿಕೇರಿ-ನಾಪೋಕ್ಲು ರಸ್ತೆ ಸಂಪರ್ಕ ಕಡಿತ

05/08/2020

ಮಡಿಕೇರಿ ಆ. 5 : ಭಾರೀ ಮಳೆಯಿಂದ ಭಾಗಮಂಡಲದಿಂದ ಮಡಿಕೇರಿ ಮತ್ತು ನಾಪೋಕ್ಲು ಕಡೆಗೆ ತೆರಳುವ ರಸ್ತೆಯು ಜಲಾವೃತಗೊಂಡಿದ್ದು, ಸಾರಿಗೆ ಸಂಪರ್ಕ ಕಡಿತಗೊಂಡಿರುತ್ತದೆ. ಸಾರ್ವಜನಿಕರು ಸಹಕರಿಸಲು ಮತ್ತು ಎಚ್ಚರಿಕೆಯಿಂದಿರಲು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.