ನಾಪೋಕ್ಲುವಿನಲ್ಲಿ ಸರಕಾರಿ ಶಾಲಾ ಕಟ್ಟಡ ಕುಸಿತ
05/08/2020

ಮಡಿಕೇರಿ ಆ. 5 : ನಾಪೋಕ್ಲುವಿನ ಸುತ್ತಮುತ್ತಲ ಗ್ರಾಮಗಳಲ್ಲಿ ಬಿರುಗಾಳಿ ಸಹಿತ ಮಳೆಯಾಗುತ್ತಿದ್ದು, ಇಲ್ಲಿನ ಜಿಎಂಪಿ ಶಾಲೆಯ ಹಳೆಯ ಕಟ್ಟಡ ಕುಸಿದು ಬಿದ್ದಿದ್ದು, ಅಪಾರ ನಷ್ಟವಾಗಿದೆ.
ಅಲ್ಲದೆ ಕಲ್ಲುಮೊಟ್ಟೆ ರಸ್ತೆ ಮಾರ್ಗ ವಿದ್ಯುತ್ ಕಂಬ ನೆಲಕ್ಕೆ ಬಿದ್ದಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ.

