ಮಡಿಕೇರಿಯಲ್ಲಿ ಪತ್ರಕರ್ತರಿಗೆ ಕೋವಿಡ್ ಪರೀಕ್ಷೆ

05/08/2020

ಮಡಿಕೇರಿ ಆ. 5 : ಕೊಡಗು ಜಿಲ್ಲಾ ಪತ್ರಕರ್ತರ ಸಂಘದಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಕಾರದಲ್ಲಿ ಪತ್ರಕರ್ತರಿಗೆ ಬುಧವಾರ ಕೊರೋನಾ ಸೋಂಕು ಪರೀಕ್ಷೆ ಮಾಡಲಾಗಿದೆ.
ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಮುಂದಾಳತ್ವದಲ್ಲಿ ಡಾ.ಗೋಪಿನಾಥ್ ಉಸ್ತುವಾರಿಯಲ್ಲಿ ಮಡಿಕೇರಿಯ ಪತ್ರಿಕಾ ಭವನದಲ್ಲಿ ಗಂಟಲು ಮತ್ತು ಮೂಗಿನ ದ್ರವ ಸಂಗ್ರಹಿಸಲಾಯಿತು.
40 ಪತ್ರಕರ್ತರು ಹೆಸರು ನೋಂದಾಯಿಸಿಕೊಂಡಿದ್ದು, 29 ಜನ ಮಾದರಿ ನೀಡಿದರು.
ಕೊರೋನಾ ವೈದ್ಯಕೀಯ ಪರೀಕ್ಷೆ ನಡೆದ ಹಿನ್ನೆಲೆಯಲ್ಲಿ ಪತ್ರಿಕಾ ಭವನ ಸಂಪೂರ್ಣ ಸ್ಯಾನಿಟೈಸರ್ ಮಾಡಲಾಯಿತು. ಬುಧವಾರ ಮಧ್ಯಾಹ್ನ ಮೇಲೆ ಪತ್ರಿಕಾ ಭವನ ಮುಚ್ಚಿದ್ದು, ಗುರುವಾರವೂ ಮುಚ್ಚಿರುತ್ತದೆ. ಗುರುವಾರ ಸಂಜೆ ಅಥವಾ ಶುಕ್ರವಾರ ಪತ್ರಕರ್ತರ ಕೊರೋನಾ ವೈದ್ಯಕೀಯ ಪರೀಕ್ಷಾ ವರದಿ ಬಹಿರಂಗವಾಗಲಿದೆ. ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಇಬ್ಬರು ಸದಸ್ಯರಿಗೆ ಈಗಾಗಲೇ ಪಾಸಿಟಿವ್ ಬಂದಿದ್ದು, ಒಬ್ಬರು ಕೋವಿಡ್ ಆಸ್ಪತ್ರೆಯಲ್ಲಿ ಮತ್ತು ಇನ್ನೊಬ್ಬರು ಹೋಂ ಐಸೋಲೇಷನ್ ನಲ್ಲಿದ್ದಾರೆ. ಪತ್ರಕರ್ತರೊಬ್ಬರ ಪತ್ನಿಗೂ ಪಾಸಿಟಿವ್ ಬಂದಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.