ಜಿಲ್ಲೆಯಲ್ಲಿ 25 ಪ್ರಕರಣ ಪತ್ತೆ : ಸೋಂಕಿತರ ಸಂಖ್ಯೆ 585ಕ್ಕೆ ಏರಿಕೆ

ಮಡಿಕೇರಿ ಆ. 5 : ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಬುಧವಾರ 25 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 585ಕ್ಕೆ ತಲುಪಿದ್ದು, ಇವರಲ್ಲಿ 342 ಮಂದಿ ಗುಣಮುಖರಾಗಿದ್ದಾರೆ.
ಪ್ರಸ್ತುತ ಜಿಲ್ಲೆಯಲ್ಲಿ 233 ಸಕ್ರಿಯ ಕೊರೊನಾ ಪ್ರಕರಣಗಳಿದ್ದು, 10 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ಮೆಂಟ್ ವಲಯಗಳ ಸಂಖ್ಯೆ 157 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಬುಧವಾರ ಬೆಳಗ್ಗೆ 4 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಮಡಿಕೇರಿಯ ಆಜಾದ್ ನಗರದ 75 ಮತ್ತು 33 ವರ್ಷದ ಪುರುಷ, 27 ವರ್ಷದ ಮಹಿಳೆ ಹಾಗೂ ವಿರಾಜಪೇಟೆಯ ಬೆಕ್ಕೆಸೊಡ್ಲೂರುವಿನ 45 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದೆ.
ಮಧ್ಯಾಹ್ನ 2 ಗಂಟೆ ವೇಳೆಗೆ 21 ಹೊಸ ಸೋಮಕಿನ ಪ್ರಕರಣಗಳು ಪತ್ತೆಯಾಗಿದೆ. ಕುಶಾಲನಗರದ ವಾಸವಿ ಮಹಲ್ ಬಳಿಯ 47 ವರ್ಷದ ಮಹಿಳೆ, ಎಚ್.ಆರ್.ಪಿ ಕಾಲೋನಿಯ 45 ವರ್ಷದ ಪುರುಷ, ಮುಳ್ಳುಸೋಗೆಯ ಕುವೆಂಪು ಬಡಾವಣೆಯ 80 ವರ್ಷದ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿದೆ.
ಸೋಮವಾರಪೇಟೆಯ ಗೌಡಳ್ಳಿಯ ದೊಡ್ಡಮಳ್ತ್ತೆಯ 23 ವರ್ಷದ ಪುರುಷ, ಸೋಮವಾರಪೇಟೆಯ ರೇಂಜರ್ ಬ್ಲಾಕಿನ 26 ಮತ್ತು 24 ವರ್ಷದ ಪುರುಷ, ನಗರದ ಪೆÇಲೀಸ್ ವಸತಿ ಗೃಹದ 27 ವರ್ಷದ ಪುರುಷ, ಚೆಟ್ಟಳ್ಳಿ ಫಾರಂನ 24 ವರ್ಷದ ಮಹಿಳೆ, 2 ಮತ್ತು 3 ವರ್ಷದ ಬಾಲಕಿಯರು, ನೆಲ್ಲಿಹುದಿಕೇರಿಯ 28 ವರ್ಷದ ಪುರುಷ ಮತ್ತು 49 ವರ್ಷದ ಮಹಿಳೆಯಲ್ಲಿ ಕೊರೊನಾ ಸೋಂಕಿರುವುದು ದೃಢವಾಗಿದೆ.
ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆಯ ಹುಲುಸೆ ಮೂಡರಹಳ್ಳಿಯ 49 ವರ್ಷದ ಪುರುಷ, ನಗರೂರು ಗ್ರಾಮದ 55 ವರ್ಷದ ಪುರುಷ, ತೊರೆನೂರುವಿನ 24 ವರ್ಷದ ಪುರುಷ, ಹೆಬ್ಬಾಲೆಯ ಬಾರ್ ರಸ್ತೆಯ 17 ವರ್ಷದ ಮಹಿಳೆ, ಮಡಿಕೇರಿ ತಾಲ್ಲೂಕಿನ ಸಂಪಾಜೆಯ 41 ವರ್ಷದ ಪುರುಷ, ಮಡಿಕೇರಿ ಮಹದೇವಪೇಟೆಯ 36 ವರ್ಷದ ಪುರುಷ, ದಾಸವಾಳ ರಸ್ತೆಯ 51 ವರ್ಷದ ಮಹಿಳೆ, ಮಹದೇವಪೇಟೆಯ ಮಖಾನ್ ರಸ್ತೆಯ 48 ಮತ್ತು 21 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ.
