ಅಯೋಧ್ಯೆ ಕರಸೇವೆಯಲ್ಲಿ ಭಾಗಿಯಾಗಿದ್ದವರಿಗೆ ಸುಂಟಿಕೊಪ್ಪದಲ್ಲಿ ಸನ್ಮಾನ

05/08/2020

ಸುಂಟಿಕೊಪ್ಪ,ಆ.5: ಅಯೋಧ್ಯಯೆಲ್ಲಿ ಶ್ರೀ ರಾಮ ಮಂದಿರಕ್ಕೆ ಭೂಮಿ ಪೂಜೆಯ ನಡೆಯುತ್ತಿದ್ದು ಸುಂಟಿಕೊಪ್ಪ ವಿಶ್ವ ಹಿಂದೂ ಪರಿಷತ್, ಆರ್‍ಎಸ್‍ಎಸ್,ಭಜರಂಗದಳದ ವತಿಯಿಂದ ಶ್ರೀ ಕೋದಾಂಡ ರಾಮ ಮಂದಿರದಲ್ಲಿ ವಿಶೇಷ ಭೂಮಿ ಪೂಜೆ ಹಾಗೂ ಭಜನೆಯನ್ನು ನಡೆಸಲಾಯಿತು.
ರಾಮನ ಜನ್ಮಭೂಮಿ ಆಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ದೇಶದ ಪ್ರಧಾನಿ ನರೇಂದ್ರಮೋದಿಯವರು ಉತ್ತರ ಪ್ರದೇಶದಲ್ಲಿ ಭೂಮಿಪೂಜೆಯನ್ನು ನೇರವೇರಿಸುತ್ತಿದ್ದು, ತಾ. 5 ರಂದು ಸುಂಟಿಕೊಪ್ಪದ ಸಂಘ ಪರಿವಾರದ ಸದಸ್ಯರು ಹಾಗೂ ಹಿಂದೂ ಭಾಂವದವರು ಶ್ರೀ ಕೋದಾಂಡ ರಾಮ ಮಂದಿರದಲ್ಲಿ ಭಜನೆ ಹಾಗೂ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದರು. ದೇವಾಲಯದ ಆರ್ಚಕರಾದ ದರ್ಶನ್ ರಾಮನಿಗೆ ಪೂಜೆ ಮಹಾಮಂಗಳಾರತಿ ನಡೆಸಿದರು.
ಇದೇ ಸಂದರ್ಭ 1992 ರಲ್ಲಿ ಆಯೋಧ್ಯಯೆಲ್ಲಿ ಕರಸೇವೆಗೆ ತೆರಳಿದ ಎಂ.ಎನ್.ಕೊವiರಪ್ಪ,ಚೆನ್ನಬಸಪ್ಪ,ಪಟ್ಟೆಮನೆ.ಕೆ.ಶೇಷಪ್ಪ,ಲಿಂಗರಾಜಪ್ಪ,ವೈ.ಡಿ.ಈರಪ್ಪ, ಹೊಸಮನೆ ತಮ್ಮಪ್ಪ,ಬಿ.ಕೆ.ವಿಶ್ವನಾಥ ರೈ ಹಾಗೂ 42 ವರ್ಷಗಳಕಾಲ ಶ್ರೀಕೊದಾಂಡ ರಾಮ ಮಂದಿರದಲ್ಲಿ ಆರ್ಚಕರಾಗಿ ಸೇವೆ ಸಲ್ಲಿಸಿದ್ದ ಗಣೇಶ್ ಶರ್ಮ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭ ಕೊಡಗು ಜಿಲ್ಲಾ ವಿಶ್ವ ಹಿಂದೂ ಪರಿಷತ್ ಪ್ರಧಾನ ಕಾರ್ಯದರ್ಶಿ ಡಿ.ನರಸಿಂಹ, ನಗರ ಬಿಜೆಪಿ ಅಧ್ಯಕ್ಷ ಪಿ.ಆರ್. ಸುನಿಲ್‍ಕುಮಾರ್ ಆರ್.ಶಾಂತರಾಂ ಕಾಮತ್, ದಾಸಂಡ ರಮೇಶ್ ಚಂಗಪ್ಪ, ಹಿರಿಯರಾದ ಪಿ.ಕೆ.ಮುತ್ತಣ್ಣ, ಗೌರಿ ಗಣೇಶ ಆಚರಣಾ ಸಮಿತಿ ಅಧ್ಯಕ್ಷ ಧನುಕಾವೇರಪ್ಪ, ವಿಶ್ವಹಿಂದೂ ಪರಿಷತ್ ಅಧ್ಯಕ್ಷ ಎ.ಶ್ರೀಧರ್ ಕುಮಾರ್, ಪ್ರಧಾನ ಕಾರ್ಯದರ್ಶಿ ಬಿ.ಕೆಪ್ರಶಾಂತ್ (ಕೊಕಾ), ಬಜರಂಗದಳ ಅಧ್ಯಕ್ಷ ವಿಘ್ನೇಶ್, ತಾ.ಪಂ.ಸದಸ್ಯೆ ಓಡಿಯಪ್ಪನ ವಿಮಲಾವತಿ ಸುದೀಶ್ ಹಾಗೂ ಭಕ್ತಾಧಿಗಳು ನೇರೆದಿದ್ದರು.