Advertisement
ಜಾಹೀರಾತು *** ಶ್ರೀಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ, ಪಂಡಿತ ಶ್ರೀಗೋಪಾಲಕೃಷ್ಣ ಭಟ್, (95354 02066) 1 ನೇ ಮಹಡಿ ಆರ್.ವಿ.ಭದ್ರಯ್ಯ ಸ್ಟೋರ್ ಎದುರು, ಬಾಷ್ಯಂ ಸರ್ಕಲ್, ರಾಜಾಜಿನಗರ, ಬೆಂಗಳೂರು – ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ನೀಡುತ್ತೇವೆ. ಇಂದೇ ಕರೆ ಮಾಡಿ ಪಂಡಿತ ಶ್ರೀಗೋಪಾಲ ಕೃಷ್ಣ ಭಟ್, ಶ್ರೀಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ – 95354 02066. ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರು ಕಾಟ, ಮಾಟ, ಮಂತ್ರ ನಿವಾರಣೆ ಮನೇಲಿ ಕಿರಿಕಿರಿ, ಅತ್ತೆ, ಸೊಸೆ ಜಗಳ, ಸಂತಾನ ಪ್ರಾಪ್ತಿ, ಬಿಸಿನೆಸ್ ಪ್ರಾಬ್ಲಮ್, ಡ್ರೈವರ್ಸ್ ಪ್ರಾಬ್ಲಮ್, ಪ್ರೀತಿ-ಪ್ರೇಮ ವಿಚಾರಗಳಿಗೆ ಶೀಘ್ರ ಪರಿಹಾರ ನೀಡಲಾಗುವುದು. ಇಂದೇ ಕರೆ ಮಾಡಿ ನಿಮ್ಮ ಸರ್ವ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಿ. ದೂರದ ಊರಿನವರಿಗೆ ಫೋನ್ ಕರೆ ಅಥವಾ ವ್ಯಾಟ್ಸ್ ಪ್ ಮೂಲಕ ಪರಿಹಾರ ತಿಳಿಸಲಾಗುವುದು. ಇಂದೇ ಸಂಪರ್ಕಿಸಿ : ಪಂಡಿತ ಶ್ರೀಗೋಪಾಲಕೃಷ್ಣ ಭಟ್, (95354 02066) 1 ನೇ ಮಹಡಿ ಆರ್.ವಿ.ಭದ್ರಯ್ಯ ಸ್ಟೋರ್ ಎದುರು, ಬಾಷ್ಯಂ ಸರ್ಕಲ್, ರಾಜಾಜಿನಗರ, ಬೆಂಗಳೂರು.
12:10 AM Tuesday 26-October 2021

ವಿರಾಜಪೇಟೆಯಲ್ಲಿ ಹಿಂದೂಪರ ಸಂಘಟನೆಗಳಿಂದ ವಿಶೇಷ ಪೂಜೆ ಮತ್ತು ಸಂಕಲ್ಪ

05/08/2020

ಮಡಿಕೇರಿ ಆ. 5 : ಅಖಂಡ ಭಾರತದ ಹಿಂದೂಗಳ ಶ್ರದ್ಧಾ ಕೇಂದ್ರವಾಗಿದ್ದ ಅಯೋದ್ಯೆಯಲ್ಲಿ ನೆಲೆಕಂಡ ಶ್ರೀ ರಾಮಚಂದ್ರರ ಭೌವ್ಯ ದೇಗುಲದ ನಿರ್ಮಾಣದ ಶಿಲನ್ಯಾಸ ಕಾರ್ಯಕ್ರಮ ಅಂಗವಾಗಿ ವಿರಾಜಪೇಟೆ ನಗರದ ಪ್ರಮುಖ ದೇವಾಲಯದಲ್ಲಿ ಹಿಂದೂ ಪರ ಸಂಘಟನೆಗಳಿಂದ ವಿಶೇಷ ಪೂಜೆ ನೆರವೇರಿಸಲಾಯಿತು.
ವಿಶ್ವಹಿಂದೂ ಪರಿಷತ್,ರಾಷ್ಟ್ರೀಯ ಸ್ವಯಂ ಸೇವಕ ಸಂಘ್, ತಾಲ್ಲೂಕು ಭಜರಂಗದಳ ವಿರಾಜಪೇಟೆ ನಗರ ಶಾಖೆಗಳ ವತಿಯಿಂದ ಸಂಕಲ್ಪ ಪೂಜೆ ನೆರೆವರಿಸಲಾಯಿತು.
ದೇಗುಲದಲ್ಲಿ ಘಂಠಾಘೋಷದೊಂದಿಗೆ ಘೋಷಣೆಗಳನ್ನು ಕೂಗಿ ಮಂದಿರ ನಿರ್ಮಾಣದಲ್ಲಿ ಯಾವುದೇ ಅಡೆ ತಡೆಗಳು ಬಾರದೆ ಸುಸುತ್ರವಾಗಿ ನೆರವೆರಲು ಸಂಘಟನೆಗಳ ಪ್ರಮುಖರು ಪ್ರಾರ್ಥನೆ ಮಾಡಿದರು.
ಮಹಾ ಗಣಪತಿಗೆ ಪೊಜೆ ಸಲ್ಲಿಸಿದ ನಂತರ ಸಿಹಿ ಹಂಚಲಾಯಿತು.
ಈ ಸಂದರ್ಭದಲ್ಲಿ 1992 ರ ಡಿಸೆಂಬರ್ ತಿಂಗಳ 6 ರಂದು ನಡೆದ ಕರಸೇವೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ. ಕರಸೇವೆಕನಾಗಿ ಸೆವೆಸಲ್ಲಿಸಿದ ಮೈತಾಡಿ ಗ್ರಾಮದ ಐಚ್ಚೇಟ್ಟಿರ ಕೇಸರಿ ಅವರನ್ನು ಶಾಲು ಹೊದಿಸಿ ಸನ್ಮಾನ ಮಾಡಲಾಯಿತು.
ನಗರದ ಅಪ್ಪಯ್ಯ ಸ್ವಾಮಿ ರಸ್ತೆಯಲ್ಲಿರುವ ಪುರಾತನವಾದ ಶ್ರೀ ಆಂಜನೇಯ ದೇಗುಲದಲ್ಲಿ ಗುರು ಹಿರಿಯರು ದೇಗುಲದ ಅರ್ಚಕರು ಪೊಜೆ ಸಲ್ಲಿಸಿದರು.

ವಿಶ್ವ ಹಿಂದೂ ಪರಿಷತ್ ನ ತಾಲ್ಲೂಕು ಕಾರ್ಯದರ್ಶಿ ಬಿ.ಎಂ.ಕುಮಾರ್, ಆರ್.ಎಸ್.ಎಸ್ ನ ನಗರ ಕಾರ್ಯವಾಹಕ್ ಬಿ.ವಿ. ಹೇಮಂತ್, ತಾಲ್ಲೂಕು ಭಜರಂಗ್‍ದಳ ಸಂಚಾಲಕ ವಿವೇಕ್ ರೈ, ನಗರ ಸಂಚಾಲಕ ದಿನೇಶ್ ನಾಯರ್, ಹಿರಿಯರಾದ ಮಾಳೇಟಿರ ಶ್ರೀನಿವಾಸ್, ನಗರ ಭಾ.ಜ.ಪ ಅಧ್ಯಕ್ಷ ಟಿ.ಪಿ. ಕೃಷ್ಣ, ಪಟ್ಟಣ ಪಂಚಾಯಿತಿ ಸದಸ್ಯರು, ಹಿಂದೂ ಪರ ಸಂಘಟನೆಗಳ ಪ್ರಮುಖ ಮತ್ತು ಧರ್ಮಾಭಿಮಾನಿಗಳು ಹಾಜರಿದ್ದರು.
ಕೊಡಗು ಜಿಲ್ಲೆಯಲ್ಲಿ 144 ಕಾಯ್ದೆ ಜಾರಿಯಲ್ಲಿರುವುದುರಿಂದ ಅಹಿತಕರ ಘಟನೆಗಳು ಸಂಭವಿಸದಂತೆ ಆರಕ್ಷಕ ಇಲಾಖೆಯಿಂದ ಭಿಗಿ ಬಂದೂಬಸ್ತು ಕಲ್ಪಿಸಲಾಗಿತ್ತು.