ನಾಗರಿಕ ಸೇವಾ ಪರೀಕ್ಷೆಯಲ್ಲಿ ಮ್ಯಾನಿಫೆಸ್ಟ್ ಐ.ಎ.ಎಸ್. ಸಾಧನೆ

05/08/2020

ಮಡಿಕೇರಿ ಆ. 5 : ಕೇಂದ್ರ ಲೋಕ ಸೇವಾ ಆಯೋಗವು ಆಯೋಜಿಸಿದ 2019ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯಲ್ಲಿ ಬೆಂಗಳೂರಿನ ಪ್ರತಿಷ್ಠಿತ ಮ್ಯಾನಿಫೆಸ್ಟ್ ಐ.ಎ.ಎಸ್. ಸಂಸ್ಥೆಯ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಅಕ್ಟೋಬರ್ 2018ರಲ್ಲಿ ಪ್ರಾರಂಭವಾದ ಈ ಸಂಸ್ಥೆಯು ನಾಗರಿಕ ಸೇವಾ ಪರೀಕ್ಷೆಯ ಎಲ್ಲ ಹಂತದ ಎಂದರೆ, ಪೂರ್ವಭಾವಿ, ಮುಖ್ಯ ಪರೀಕ್ಷೆ ಹಾಗೂ ವ್ಯಕ್ತಿತ್ವ ಪರೀಕ್ಷೆಗಳ ತರಬೇತಿಯನ್ನು ನೀಡುತ್ತದೆ. 2018 ಹಾಗೂ 2019 ನೇ ವರ್ಷದಲ್ಲಿ ತಮ್ಮ ವಿವಿಧ ಬ್ಯಾಚಗಳಲ್ಲಿ ತರಬೇತಿ ಪಡೆದ ಕರ್ನಾಟಕದ ಹಾಗೂ ಇತರ ರಾಜ್ಯಗಳ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆಗೊಂಡಿದ್ದಾರೆ.
ಧೀರಜಕುಮಾರ್ ಸಿಂಗ್ 64, ಸಾಯಿ ಕಾರ್ತಿಕ್ 103, ಕುಮಾರ್ ಶಿವಾಶೀಶ್ 108, ರಾಜೇಂದ್ರ ರಾಜ್ 340, ಜಗದೀಶ್ ಅಡಹಳ್ಳಿ 440, ಪ್ರಫುಲ್ ದೇಸಾಯಿ 532, ದರ್ಶನಕುಮಾರ್ 594, ಸಮೀರ ರಾಜಾ 603, ಕುಮಾರಿ ಮನಿಷಾ 617, ವಾದಿತ್ಯ ನಾಯ್ಕ್ 780ನೇ ರ್ಯಾಂಕಗಳೊಂದಿಗೆ ಐ.ಎ.ಎಸ್., ಐ.ಪಿ.ಎಸ್. ಸೇರಿದಂತೆ ವಿವಿಧ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ. ಇದರಲ್ಲಿ ಜಗದೀಶ್, ಪ್ರಫುಲ್ ಹಾಗೂ ದರ್ಶನಕುಮಾರ್ ಕನ್ನಡಿಗರು. ವಿಶೇಷವೇನೆಂದರೆ ದರ್ಶನಕುಮಾರ್ ಕನ್ನಡ ಮಾಧ್ಯಮದಲ್ಲೇ ಪರೀಕ್ಷೆಯನ್ನು ಬರೆದು ಯಶಸ್ವಿಯಾಗಿದ್ದಾರೆ.
ಕೇವಲ ಎರಡು ವರ್ಷಗಳಲ್ಲಿ ಇಷ್ಟು ಸಾಧನೆಗೈದ ಮ್ಯಾನಿಫೆಸ್ಟ್ ಸಂಸ್ಥೆಯು ತಮ್ಮ ಯಶಸ್ವಿ ವಿದ್ಯಾರ್ಥಿಗಳಿಗೆ ಶುಭಕೋರಿದೆ ಹಾಗೂ ಮುಂಬರುವ ವರ್ಷಗಳಲ್ಲಿ ಇನ್ನೂ ಹೆಚ್ಚು ಫಲಿತಾಂಶ ನೀಡಲು ಸಿದ್ಧವಾಗಿದ್ದು, ಕೋವಿಡ್-19 ತಂದೊಡ್ಡಿದ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಆನ್ಲೈನ್ ತರಗತಿಗಳನ್ನು ಸೆಪ್ಟೆಂಬರ 7 ರಿಂದ ಪ್ರಾರಂಭಿಸುತ್ತಿದೆ.