ಜಿಲ್ಲೆಯಲ್ಲಿ 9 ಹೊಸ ಕೊವೀಡ್ ಪ್ರಕರಣ ಪತ್ತೆ : 369 ಮಂದಿ ಗುಣಮುಖ

06/08/2020

ಮಡಿಕೇರಿ ಆ. 6 : ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ 9 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ.
ಕುಶಾಲನಗರದ ನೇತಾಜಿ ಬಡವಾಣೆಯ 19 ವರ್ಷದ ಪುರುಷ.
ಪಿರಿಯಾಪಟ್ಟಣದ ಆವರ್ತಿಯ 43 ವರ್ಷದ ಪುರುಷ.
ಶನಿವಾರಸಂತೆಯ ತ್ಯಾಗರಾಜ ಕಾಲೋನಿಯ 46 ವರ್ಷದ ಪುರುಷ.
ವಿರಾಜಪೇಟೆಯ ಮೊಗರ್ ಗಲ್ಲಿಯ 40 ವರ್ಷದ ಮಹಿಳೆ ಮತ್ತು 22 ವರ್ಷದ ಪುರುಷ.
ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಕುಶಾಲನಗರದ ಮುಳ್ಳುಸೋಗೆಯ 34 ವರ್ಷದ ಪುರುಷ.
ವಿರಾಜಪೇಟೆಯ 37ಮತ್ತು 45 ವರ್ಷದ ಮಹಿಳೆ.
ಮಾದಾಪುರದ 48 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿನ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 594 ಆಗಿದ್ದು, 369 ಮಂದಿ ಗುಣಮುಖರಾಗಿದ್ದಾರೆ. 215 ಸಕ್ರಿಯ ಪ್ರಕರಣಗಳಿದ್ದು, 10 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 155 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.