ಕೇಂದ್ರವನ್ನು ಅಭಿನಂದಿಸಿದ ರಾಷ್ಟ್ರಪತಿ

06/08/2020

ನವದೆಹಲಿ ಆ.6 : ಐತಿಹಾಸಿಕ ರಾಮಮಂದಿರ ದೇಗುಲ ನಿರ್ಮಾಣ ಕಾರ್ಯಕ್ಕೆ ಪ್ರಧಾನಿ ಮೋದಿ ಶಿಲಾನ್ಯಾಸ ನೆರವೇರಿಸಿದ ಬೆನ್ನಲ್ಲೇ ಅತ್ತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕೇಂದ್ರ ಸರ್ಕಾರವನ್ನು ಅಭಿನಂದಿಸಿದ್ದಾರೆ.
ರಾಮಮಂದಿರಕ್ಕೆ ಪ್ರಧಾನಿ ಮೋದಿ ಶಿಲಾನ್ಯಾಸ ಮಾಡಿದ ಬೆನ್ನಲ್ಲೇ ಟ್ವೀಟ್ ಮಾಡಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು, ರಾಮಮಂದಿರ ಭವ್ಯ ದೇಗುಲ ನಿರ್ಮಾಣದ ಉದ್ಘಾಟನೆ ಮಾಡಿದ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ತಿಳಿಸುತ್ತೇನೆ. ರಾಮಮಂದಿರ ಭವ್ಯ ದೇಗುಲವು ರಾಮರಾಜ್ಯದ ಆದರ್ಶಗಳನ್ನು ಆಧರಿಸಿ ಆಧುನಿಕ ಭಾರತದ ಸಂಕೇತವಾಗಲಿದೆ ಎಂದು ನಾನು ನಂಬುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
‘ಅಯೋಧ್ಯೆಯ ರಾಮ ದೇವಾಲಯದ ಅಡಿಪಾಯ ಹಾಕಿದ್ದಕ್ಕಾಗಿ ಎಲ್ಲರಿಗೂ ಶುಭಾಶಯಗಳು. ಭವ್ಯ ದೇಗುಲ ಕಾನೂನಿನಡಿಯಲ್ಲೇ ನಿರ್ಮಿಸಲಾಗುತ್ತಿರುವುದರಿಂದ, ಇದು ಭಾರತದ ಸಾಮಾಜಿಕ ಸಾಮರಸ್ಯ ಮತ್ತು ಜನರ ಉತ್ಸಾಹವನ್ನು ವ್ಯಾಖ್ಯಾನಿಸುತ್ತದೆ. ಇದು ರಾಮರಾಜ್ಯದ ಆದರ್ಶಗಳಿಗೆ ಸಾಕ್ಷಿಯಾಗಲಿದೆ ಮತ್ತು ಆಧುನಿಕ ಭಾರತದ ಸಂಕೇತವಾಗಲಿದೆ ಎಂದು ಕೋವಿಂದ್ ಹೇಳಿದ್ದಾರೆ.