161 ಅಡಿ ಎತ್ತರದ ರಾಮದೇವಾಲಯ

06/08/2020

ನವದೆಹಲಿ ಆ.6 : ರಾಮ ಮಂದಿರದ ಹೊಸ ಸುಧಾರಿತ ವಿನ್ಯಾಸದ ನಕ್ಷೆಯನ್ನು ಟ್ರಸ್ಟ್ ಬಿಡುಗಡೆ ಮಾಡಿದೆ.
ವಿನ್ಯಾಸದ ನಕ್ಷೆಯಲ್ಲಿ ಗೋಪುರಗಳು, ಸ್ತಂಭಗಳು ಮತ್ತು ಗುಮ್ಮಟಗಳನ್ನು ಹೊಂದಿರುವ ಮೂರು ಅಂತಸ್ತಿನ ಕಲ್ಲಿನ ರಚನೆಯನ್ನು ತೋರಿಸಿದೆ. ಪ್ರಸ್ತಾವಿತ ದೇವಾಲಯವು ಮೂಲ ಮಾದರಿಯ 141 ಅಡಿ ಬದಲಿಗೆ 161 ಅಡಿ ಎತ್ತರವನ್ನು ಹೊಂದಿರುತ್ತದೆ ಮತ್ತು ಅದರ ವಾಸ್ತುಶಿಲ್ಪಿ ಪ್ರಕಾರ ಅದರ ಗಾತ್ರವೂ ದ್ವಿಗುಣಗೊಂಡಿದೆ.
ಒಳಾಂಗಣ ಸಂಕೀರ್ಣವೂ ಕೆತ್ತನೆಗಳೊಂದಿಗೆ ಹೆಚ್ಚಿನ ಗುಮ್ಮಟಗಳಿರಲಿದೆ. ಪ್ರಸ್ತಾವಿತ ಬದಲಾವಣೆಗಳ ನಂತರ, ರಾಮ ದೇವಾಲಯದ ಆವರಣವು 100 ರಿಂದ 120 ಎಕರೆ ಪ್ರದೇಶದಲ್ಲಿ ಹರಡುವ ಸಾಧ್ಯತೆಯಿದೆ. ಇದು ವಿಶ್ವದ ಮೂರನೇ ದೊಡ್ಡ ದೇವಾಲಯವಾಗಿರಲಿದೆ. ಹೊಸ ಉದ್ದೇಶಿತ ಮಂದಿರಕ್ಕಾಗಿ ಟ್ರಸ್ಟ್ ಹೆಚ್ಚುವರಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಿದೆ.

 • ಅಯೋಧ್ಯೆಯ ರಾಮ ದೇವಾಲಯವು 161 ಅಡಿ ಎತ್ತರವಾಗಲಿದೆ. ಮಂದಿರ ನಾಗರಶೈಲಿಯಲ್ಲಿ ರಚನೆಯಾಗಲಿದೆ.
 • 1988ರಲ್ಲಿ ತಯಾರಿಸಿದ ಮೂಲ ವಿನ್ಯಾಸವು ಎತ್ತರವನ್ನು 141 ಅಡಿ ಎಂದು ಉಲ್ಲೇಖಿಸಲಾಗಿತ್ತು.
 • ಹಿಂದಿನ ವಿನ್ಯಾಸವನ್ನು 1988ರಲ್ಲಿ ತಯಾರಿಸಲಾಗಿತ್ತು ಅಂದಿನಿಂದ 30 ವರ್ಷಗಳು ಕಳೆದಿವೆ.
 • ಮಂದಿರದ ಎತ್ತರವನ್ನು 141 ಅಡಿಗಳಿಂದ 161 ಅಡಿಗಳಿಗೆ ಹೆಚ್ಚಿಸಲಾಗಿದೆ.
 • ಒಟ್ಟು ಮಹಡಿಗಳ ಸಂಖ್ಯೆ ಮೂರು ಆಗಿರುತ್ತದೆ.
 • ಹೊಸ ವಿನ್ಯಾಸದಲ್ಲಿ ಎರಡು ಮಂಟಪಕ್ಕೆ ಇನ್ನು ಹೆಚ್ಚುವರಿ ಮೂರು ಮಂಟಪಗಳನ್ನು ಸೇರಿಸಲಾಗಿದೆ.
 • ಮಂದಿರದಲ್ಲಿ ಒಂದು ಮಂಟಪದಲ್ಲಿ ತಲಾ ಐದು ಗುಮ್ಮಟಗಳನ್ನು ಮತ್ತು ಗರ್ಭಗುಡಿ ಒಂದು ಗುಮ್ಮಟವನ್ನು ಹೊಂದಿರುತ್ತದೆ.
 • ಮಂದಿರದ ಎಲ್ಲಾ ಮಂಟಪಗಳಲ್ಲಿ ಕನಿಷ್ಠ 50,000 ಭಕ್ತರಿಗೆ ಆತಿಥ್ಯ ವಹಿಸಲು ಸಾಧ್ಯವಾಗುತ್ತದೆ.
 • ಮೂರು ಮಹಡಿಗಳಲ್ಲಿ ಸ್ತಂಭಗಳ ಸಂಖ್ಯೆ 212ರಿಂದ 318ಕ್ಕೆ ಏರಿಸಲಾಗಿದೆ.
 • ಹಿಂದಿನ ವಿನ್ಯಾಸದ ಆಧಾರದ ಮೇಲೆ ಕೆತ್ತಿದ ಎಲ್ಲಾ ಕಂಬಗಳು, ಕಲ್ಲುಗಳನ್ನು ಇಲ್ಲೂ ಬಳಸಲಾಗುತ್ತದೆ. ಅವು ಒಂದು ಮಹಡಿಗೆ ಸಾಕಾಗುತ್ತದೆ. ಉಳಿದ ಎರಡು ಮಹಡಿಗಳಿಗೆ ಹೆಚ್ಚಿನ ಕಲ್ಲುಗಳನ್ನು ತಂದು ಕೆತ್ತಲಾಗುತ್ತದೆ.
 • ಮೆಟ್ಟಿಲುಗಳ ಅಗಲ 16 ಅಡಿ ಇರುತ್ತದೆ.
 • 4 ಸಣ್ಣ ದೇವಾಲಯಗಳು ಮುಖ್ಯ ರಚನೆಯನ್ನು ಸುತ್ತುವರೆದಿವೆ.
 • 2 ಲಕ್ಷ ಇಟ್ಟಿಗೆ ಬಳಸಿ ರಾಮ ಮಂದಿರ ಅಡಿಪಾಯವನ್ನು ರೂಪಿಸಲು ಕೆತ್ತಲಾಗಿದೆ.
 • ದೇವಾಲಯದ ನಿರ್ಮಾಣಕ್ಕೆ ಕನಿಷ್ಠ 1.75 ಲಕ್ಷ ಕ್ಯೂಬಿಕ್ ಅಡಿ ಕಲ್ಲು ಬೇಕಾಗುತ್ತದೆ.
 • ಮಂದಿರ ರಾಜಸ್ಥಾನದ ಬನ್ಶಿ ಪರ್ವತದ ಕಲ್ಲುಗಳನ್ನು ಬಳಸಲಾಗುವುದು
 • ಮಂದಿರ ನಿರ್ಮಾಣಕ್ಕೆ 3.5 ವರ್ಷಗಳು ಬೇಕಾಗುತ್ತದೆ.
 • ಮಂದಿರ ನಿರ್ಮಾಣ ವೆಚ್ಚ 300 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.