ಟಿ.ಶೆಟ್ಟಿಗೇರಿ ಗ್ರಾ. ಪಂ. ವ್ಯಾಪ್ತಿಯಲ್ಲಿ ಮನೆಗೆ ಹಾನಿ : ಪರ್ಯಾಯ ವ್ಯವಸ್ಥೆ ಕಲ್ಪಿಸಲು ಮನವಿ

06/08/2020

ಮಡಿಕೇರಿ ಆ. 6 : ಶ್ರೀಮಂಗಲ ಹೋಬಳಿಯ ಟಿ.ಶೆಟ್ಟಿಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಚೀಪೆ ಕೊಲ್ಲಿ ಪೈಸಾರಿ, ಗುಟ್ಟು ಕೊಲ್ಲಿ ಪೈಸಾರಿ ಸೇರಿದಂತೆ ಹಲವಾರು ಮನೆಗಳ ಮೇಲ್ಚಾವಣಿಗಳು ಭಾರಿ ಗಾಳಿ ಮಳೆಯಿಂದ ಹಾರಿಹೋಗಿ ಅಪಾರ ನಷ್ಟ ಉಂಟಾಗಿದೆ.
ಈ ಕುಟುಂಬಗಳಿಗೆ ಜಿಲ್ಲಾಡಳಿತ ಕೂಡಲೇ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ವಿರಾಜಪೇಟೆ ತಾಲೂಕು ಬಿಜೆಪಿ ಉಪಾಧ್ಯಕ್ಷ ಮಚ್ಚಮಾಡ ಸುಮಂತ್ ಮನವಿ ಮಾಡಿದ್ದಾರೆ.