ತಲಕಾವೇರಿಗೆ ಕಾರ್ಯಾಚರಣೆ ತಂಡ ನಡೆದುಕೊಂಡೇ ಹೋಗಬೇಕಾಗಿದೆ

06/08/2020

ಮಡಿಕೇರಿ ಆ.6 : ಭಾಗಮಂಡಲ- ತಲಕಾವೇರಿ ದಾರಿಯುದ್ದಕ್ಕೂ ಬೃಹತ್ ಬರೆಗಳು ಬಿದ್ದಿದೆ. ಮಹಾಮಳೆಯ ಜಲಸ್ಫೋಟದಿಂದ ಅನಾಹುತ ಸಂಭವಿಸಿರುವ ತಲಕಾವೇರಿಗೆ ಕಾರ್ಯಾಚರಣೆ ತಂಡ ನಡೆದುಕೊಂಡೇ ಹೋಗಬೇಕಾಗಿದೆ. ಬ್ರಹ್ಮಗಿರಿ ಬೆಟ್ಟ ಕುಸಿದು ಐವರು ನಾಪತ್ತೆಯಾಗಿರುವ ಸ್ಥಳಕ್ಕೆ ಎನ್ ಡಿ ಆರ್ ಎಫ್ ತಂಡ ಕಷ್ಟಪಟ್ಟು ತಲುಪಿದೆ. ಆದರೆ ಭಾಗಮಂಡಲದಲ್ಲಿ ಪ್ರವಾಹ ಇರುವುದರಿಂದ ಜೆಸಿಬಿ ಯಂತ್ರಗಳನ್ನು ತರಲು ಸಾಧ್ಯವಾಗಲಿಲ್ಲ. ಮಡಿಕೇರಿ ತಹಶೀಲ್ದಾರ್ ಪಿ.ಎಸ್. ಮಹೇಶ್ ಸ್ಥಳದಲ್ಲಿದ್ದಾರೆ.