ಆ.7 ರಂದು ಶಾಲಾ ಶಿಕ್ಷಕರಿಗೆ ರಜೆ ಘೋಷಣೆ

06/08/2020

ಮಡಿಕೇರಿ ಆ. 6 : ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಕಳೆದ 04 ದಿನಗಳಿಂದ ಭಾರೀ ಮಳೆಯಾಗುತ್ತಿದೆ.
ಜಿಲ್ಲೆಗೆ ಆಗಸ್,್ಟ 07 ರವರೆಗೆ ರೆಡ್ ಅಲರ್ಟ್ ಘೋಷಿಸಿರುವುದರಿಂದ ವಿದ್ಯಾ ಇಲಾಖೆಗೆ ಸಂಬಂಧಿಸಿದಂತೆ “ವಿದ್ಯಾಗಮ” ಕಾರ್ಯಕ್ರಮವನ್ನು ಈ ತಿಂಗಳ 7 ನೇ ತಾರೀಖಿನ ನಂತರ ಪ್ರಾರಂಭಿಸಲು ಆದೇಶಿಸಿದೆ. ಮತ್ತು ಎಲ್ಲಾ ಶಾಲಾ ಶಿಕ್ಷಕರಿಗೆ ಆಗಸ್ಟ್ 07 ರವರೆಗೆ ರಜೆ ಘೋಷಿಸಲಾಗಿದೆ.
ಆದ್ದರಿಂದ ಶಿಕ್ಷಕರು ಮಳೆಯಲ್ಲಿ ಮನೆ ಮನೆಗೆ ತೆರಳಿ ವಿದ್ಯಾರ್ಥಿಗಳನ್ನು ಭೇಟಿ ಮಾಡುವ ಪ್ರಯತ್ನ ಮಾಡದಂತೆ ತಿಳಿಸಲಾಗಿದೆ. ಎಲ್ಲಾ ಮುಖ್ಯೋಪಾಧ್ಯಾಯರುಗಳು ಶಾಲಾ ಕಟ್ಟಡದ ಸುರಕ್ಷತೆಯ ಬಗ್ಗೆ ಪರಿಶೀಲಿಸಲು ತಿಳಿಸಲಾಗಿದೆ. ಹಾಗೂ ಶಾಲಾ ಕಟ್ಟಡವು ಯಾವುದೇ ಅಪಾಯದ ಸ್ಥಿತಿಯಲ್ಲಿದ್ದರೆ ಮತ್ತು ಬೀಳುವ ಸ್ಥಿತಿಯಲ್ಲಿದ್ದರೆ ಕೂಡಲೇ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತರಲು ಸೂಚಿಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.