ಸೋಮವಾರಪೇಟೆಯಲ್ಲಿ ವಾರದ ಸಂತೆ ರದ್ದು

06/08/2020

ಮಡಿಕೇರಿ ಆ. 6 :-ಸೋಮವಾರಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ಕೋವಿಡ್-19 ವೈರಾಣುವು ಶೀಘ್ರಗತಿಯಲ್ಲಿ ಹರಡುತ್ತಿರುವುದರಿಂದ ಮುಂಜಾಗ್ರತ ಕ್ರಮವಾಗಿ ಪ್ರತೀ ವಾರದ ಸಂತೆಯನ್ನು ಮುಂದಿನ ಆದೇಶದವರೆಗೆ ರದ್ದುಪಡಿಸಲಾಗಿರುತ್ತದೆ. ಸಾರ್ವಜನಿಕರು ಮತ್ತು ವರ್ತಕರು ಸಹಕರಿಸುವಂತೆ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪಿ.ಕೆ.ನಾಚಪ್ಪ ಅವರು ತಿಳಿಸಿದ್ದಾರೆ.