ಮರಗೋಡಿನಲ್ಲಿ ಬರೆ ಕುಸಿತ : ಕಾಫಿ ತೋಟಕ್ಕೆ ಹಾನಿ
06/08/2020

ಮಡಿಕೇರಿ ಆ. 6 : ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಮಡಿಕೇರಿ ತಾಲೂಕಿನ ಮರಗೋಡು ಗ್ರಾಮದ ದಂಬೆಕೋಡಿ ಹರೀಶ್ ಎಂಬವರ ತೋಟದಲ್ಲಿ ಬರೆ ಕುಸಿದು ಕಾಫಿ, ಅಡಿಕೆ, ಏಲಕ್ಕಿ, ಕರಿಮೆಣಸು ಬೆಳೆಗಳು ಸೇರಿ ಸುಮಾರು 1ಲಕ್ಷ ನಷ್ಟ ಸಂಭವಿಸಿದೆ.
ಮಳೆಹೆಚ್ಚಾದರೆ ಮತ್ತಷ್ಟು ನಷ್ಟ ಸಂಭವಿಸಬಹುದೆಂದು ದಂಬೆಕೋಡಿ ಹರೀಶ್ ಆತಂಕ ವ್ಯಕ್ತಪಡಿಸಿದ್ದಾರೆ.


