ಕೊಡಗಿನಲ್ಲಿ 10 ಹೊಸ ಕೋವಿಡ್ ಪ್ರಕರಣ ಪತ್ತೆ : ಸಕ್ರಿಯ ಪ್ರಕರಣ 229

August 7, 2020

ಮಡಿಕೇರಿ ಆ. 7 : ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ 10 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ.
ವಿರಾಜಪೇಟೆಯ ಬೊಯಿಕೇರಿ ಗ್ರಾಮ ಅಂಚೆಯ ಕರಗೂರಿನ 28 ವರ್ಷದ ಪುರುಷ.
ಸೋಮವಾರಪೇಟೆ ತೊರೆನೂರಿನ 27 ವರ್ಷದ ಮಹಿಳೆ.
ಮಡಿಕೇರಿ ಚೈನ್ ಗೇಟ್ ಬಳಿಯ 54 ವರ್ಷದ ಪುರುಷ.
ಮಡಿಕೇರಿ ಮುತ್ತಪ್ಪ ದೇವಾಲಯದ 50 ವರ್ಷದ ಪುರುಷ.
ವಿರಾಜಪೇಟೆ ಪೆÇನ್ನಂಪೇಟೆಯ ಕುಂದಾ ರಸ್ತೆಯ 50 ವರ್ಷದ ಪುರುಷ.
ವಿರಾಜಪೇಟೆ ಪೆÇನ್ನಂಪೇಟೆಯ 53 ವರ್ಷದ ಮಹಿಳೆ.
ಸಂಪಾಜೆ ಕೊಯ್ನಾಡುವಿನ 32 ವರ್ಷದ ಮಹಿಳೆ.
ಮಡಿಕೇರಿ ಎಲ್ ಐ ಸಿ ಕಚೇರಿ ಬಳಿಯ 53 ವರ್ಷದ ಮಹಿಳೆ.
ಶನಿವಾರಸಂತೆಯ ದುಂಡಳ್ಳಿಯ 47 ವರ್ಷದ ಪುರುಷ.
ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮುಖಾಂತರ ವಿರಾಜಪೇಟೆಯ ವಿಜಯನಗರದ 52 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 620 ಆಗಿದ್ದು, 381 ಮಂದಿ ಗುಣಮುಖರಾಗಿದ್ದಾರೆ. 229 ಸಕ್ರಿಯ ಪ್ರಕರಣಗಳಿದ್ದು, 10 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 173 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

error: Content is protected !!