ಕುಶಾಲನಗರದ ತಾವರೆಕೆರೆ ಭಾಗದಲ್ಲಿ ಜಲಾವೃತ : ಮಾರ್ಗ ಬದಲಾವಣೆ

August 7, 2020

ಮಡಿಕೇರಿ ಆ. 7 : ಭಾರೀ ಮಳೆಯಿಂದ ಕುಶಾಲನಗರದ ತಾವರೆಕೆರೆ ಭಾಗದಲ್ಲಿ ರಸ್ತೆಯು ಜಲಾವೃತಗೊಂಡಿರುತ್ತದೆ. ಸಾರ್ವಜನಿಕರ ಸುರಕ್ಷತೆಯ ದೃಷ್ಠಿಯಿಂದ ಈ ಮಾರ್ಗದಲ್ಲಿ ಸಂಚಾರವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

ಸಾರ್ವಜನಿಕರು ಕುಶಾಲನಗರ- ಗುಮ್ಮನಕೊಲ್ಲಿ-ಹಾರಂಗಿ-ಗುಡ್ಡೆಹೊಸೂರು ಮಾರ್ಗವಾಗಿ ಸಂಚರಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

error: Content is protected !!